ಧಾರವಾಡದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕ್ತಾರಾ ಮೈತ್ರಿ ಅಭ್ಯರ್ಥಿ?

ಧಾರವಾಡ ಲೋಕಸಭಾ ಕ್ಷೇತ್ರದಿಂದ 1952ರಿಂದ 1991ರವರೆಗೂ ಮೊದಲ ಹತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾದಿಸಿದ್ದರೆ, 1996ರಿಂದಲೂ ಬಿಜೆಪಿ ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉತ್ತರ ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದಿಂದ 1952ರಿಂದ 1991ರವರೆಗೂ ಮೊದಲ ಹತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾದಿಸಿದ್ದರೆ,  1996ರಿಂದಲೂ ಬಿಜೆಪಿ  ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದೆ.  ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ.

1990 ನಂತರ ವಾಜಪೇಯಿ ಯುಗದಲ್ಲಿ ಈ ಕ್ಷೇತ್ರದ  ರಾಜಕಾರಣ ಬದಲಾಗಿದ್ದು, ಜಾತಿ, ಧರ್ಮ, ಅಭಿವೃದ್ಧಿ ಮತ್ತು ಕುಟುಂಬ ರಾಜಕಾರಣ ಮತ್ತಿತರ ಅಂಶಗಳಿಂದ 1999 ರಿಂದಲೂ  ಇಲ್ಲಿನ  ಜನತೆ ಕಾಂಗ್ರೆಸ್  ಪಕ್ಷವಾಗಿ ಪರ್ಯಾಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ.ಕಳೆದ ಆಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಈ ಲೋಕಸಭಾ ವ್ಯಾಪ್ತಿಯ ಎಂಟು ಆಸೆಂಬ್ಲಿಗಳ ಪೈಕಿ ಆರರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು,

ಬಿಜೆಪಿಯ ಪ್ರಹ್ಲಾದ್ ಜೋಷಿ ಹಾಲಿ ಸಂಸದರಾಗಿದ್ದು, ಇವರ ಎದುರಾಳಿಯಾಗಿ ಕಾಂಗ್ರೆಸ್ ನಿಂದ ಶಾಕಿರ್ ಸನದಿ ಅಥವಾ ಸದಾನಂದ ದಂಗಣ್ಣನವರ್  ಕಣಕ್ಕಿಳಿಯುವ ಸಾಧ್ಯತೆ ಇದೆ.  ಇತ್ತೀಚಿಗೆ ಧಾರಾವಾಡದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ರಾಜಕೀಯ ಮುಖಂಡ ಯೋಗೇಶ್ ಗೌಡ ಮತ್ತಿತರ ಹೆಸರು ಥಳಕು ಹಾಕಿಕೊಂಡಿದ್ದರಿಂದ ವಿನಯ್ ಕುಲಕರ್ಣಿ ವರ್ಚಸ್ಸು ಕಡಿಮೆಯಾಗಿದ್ದು, ಕಾಂಗ್ರೆಸ್ ಪಕ್ಷ ಅವರನ್ನು ಕಣಕ್ಕಿಳಿಸದಿರಲು ಚಿಂತಿಸಿದೆ ಎನ್ನಲಾಗುತ್ತಿದೆ.

ಹುಬ್ಬಳ್ಳಿಯ ಯುವ ಮುಖಂಡರಾದ  ಸನದಿ ಅಥವಾ ದಂಗಣ್ಣನವರ್   ಅವರನ್ನು ಕಣಕ್ಕಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಸದ್ಯದಲ್ಲೇ ಅಂತಿಮ ತೀರ್ಮಾನ  ಕೈಗೊಳ್ಳುವ ಸಾಧ್ಯತೆ ಇದೆ.

ಹಾಲಿ ಸಂಸದ ಪ್ರಹ್ಲಾದ್ ಜೋಷಿ  ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಉದ್ಯೋಗ ಸೃಷ್ಟಿಸಿಲ್ಲ, ಮಹಿಳಾ ಸಬಲೀಕರಣ ಮತ್ತಿತರ ಯೋಜನೆಗಳು ಜಾರಿಯಾಗಿಲ್ಲ , ಮೋದಿ ಪ್ರಭಾವದಲ್ಲಿ ಈ ಭಾಗದ ಅನೇಕ ಬಿಜೆಪಿ ನಾಯಕರು ಗೆಲುವು ಸಾಧಿಸುತ್ತಿದ್ದಾರೆ, ರಾಹುಲ್ ಗಾಂಧಿ ಯುವಕರನ್ನು ಕಣಕ್ಕಿಳಿಸುವ ಮೂಲಕ ಸಮಾಜದಲ್ಲಿ ಆರೋಗ್ಯಕರ ಬದಲಾವಣೆಗೆ ಕೈ ಜೋಡಿಸುತ್ತಿದ್ದಾರೆ ಎಂದು ದಂಗಣ್ಣನವರ್ ಹೇಳಿದ್ದಾರೆ

ಮಾಜಿ ಎಂಪಿ ಐಜಿ ಸನದಿ ಪುತ್ರ ಶಕಿರ್ ಸನದಿ ಕೂಡಾ ರಾಹುಲ್ ಗಾಂಧಿ ಅವರ ನಿಕಟ ಸಂಪರ್ಕದಲ್ಲಿದ್ದು, ಅವರಿಗೆ ಟಿಕೆಟ್ ಕೊಡಿಸಲು ಕೆಲ ಕಾಂಗ್ರೆಸ್ ನಾಯಕರು ಲಾಬಿ ನಡೆಸುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಧಾರವಾಡ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯ ಪ್ರಾಬಲವಾಗಿದ್ದರೂ  ಇತ್ತೀಚಿನ ವರ್ಷಗಳಲ್ಲಿ ನಡೆದ ಲೋಕಸಭಾ ಹಾಗೂ ಆಸೆಂಬ್ಲಿ ಚುನಾವಣೆಯಲ್ಲಿ ಜಾತಿ ಅಂಶ ಹೆಚ್ಚಿನ ಪ್ರಭಾವ ಬೀರಿಲ್ಲ. ವಿಆರ್ ಎಲ್ ಮುಖ್ಯಸ್ಥ ವಿಜಯ್ ಸಂಕೇಶ್ವರಿ ಇಲ್ಲಿಂದ ಮೂರು ಬಾರಿ ಗೆದಿದ್ದರೆ, ಪ್ರಹ್ಲಾದ್ ಜೋಷಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com