ಮೊದಲು ರಾಜಕೀಯಕ್ಕೆ ಆದ್ಯತೆ, ನಂತರ ವೈದ್ಯಕೀಯ: ಅವಿನಾಶ್ ಜಾಧವ್

ಮೆಡಿಕಲ್ ಸೀಟು ಸಿಗಲೆಂದು ಹಲವು ಮಂದಿ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಾರೆ, ಆದರೆ ಅಂತಿಮ ವರ್ಷದ ಎಂಡಿ ವಿದ್ಯಾರ್ಥಿಯಾಗಿರುವ ಡಾ.ಅವಿನಾಶ್ ..
ಅವಿನಾಶ್ ಜಾಧವ್
ಅವಿನಾಶ್ ಜಾಧವ್
ಬೆಂಗಳೂರು: ಮೆಡಿಕಲ್ ಸೀಟು ಸಿಗಲೆಂದು ಹಲವು ಮಂದಿ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಾರೆ, ಆದರೆ ಅಂತಿಮ ವರ್ಷದ ಎಂಡಿ ವಿದ್ಯಾರ್ಥಿಯಾಗಿರುವ ಡಾ.ಅವಿನಾಶ್ ಜಾಧವ್ ಅವರು ಶಾಸಕನಾಗಲು ಮೊದಲ ಆದ್ಯತೆ ನೀಡುತ್ತಾರಂತೆ.
ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ, ಖಾಜಾ ಬಂದೇ ನವಾಜ್ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ವೈದ್ಯಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾರೆ,. 30 ವರ್ಷದ ಅವಿನಾಶ್ ಗೆ ರಾಜಕೀಯವೇ ಮೊದಲ ಆದ್ಯತೆ ಆಗಿದೆ.
ವಿಧಾನಸಭೆ ಚುನಾವಣೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಟ್ಟಿಗೆ ತಯಾರಾಗುತ್ತಿದುವ ಅವಿನಾಶ್ ಗೆ ಮೇ 8ರಿಂದ ಈ ವರ್ಷದ ಅಂತಿಮ ಪರೀಕ್ಷೆ ಆರಂಭವಾಗಲಿದೆ.  ಮೇ 9,11.13 ಮತ್ತು 14 ರಂದು ಪ್ರಾಕ್ಟಿಕಲ್ಸ್ ಜೊತೆಗೆ ಲಿಖಿತ ಪರೀಕ್ಷೆಯೂ ಇದೆ. ನನ್ನ ವೈದ್ಯಕೀಯ ಪರಿಕ್ಷೆಗೆ ನ್ಯಾಯ ಒದಗಿಸಲು ನನ್ನಿಂದ ಆಗದು, ಜನರ ಸೇವೆ ಮಾಡಲು ರಾಜಕೀಯಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದಿದ್ದಾರೆ,
ಅವಿನಾಶ್ ಸಹಪಾಠಿಗಳೆಲ್ಲಾ ಪರೀಕ್ಷೆಗೆ ಪುಸ್ತಕ ಓದುವುದರಲ್ಲಿ ಮಗ್ನರಾಗಿದ್ದರೇ, ಅವಿನಾಶ್ ಮಾತ್ರ ಚಿಂಚೋಳಿ ಬೀದಿ ಬೀದಿ ಸುತ್ತ ಮತಯಾಚಿಸುತ್ತಿದ್ದಾರೆ, ನಿಮ್ಮನ್ನು ರಾಜಕೀಯಕ್ಕೆ ಕರೆತರುವುದು ನಿಮ್ಮ ತಂದೆಯವರ ಐಡಿಯಾನ ಎಂಬ ಪ್ರಶ್ನೆಗೆ ಉತ್ತರಿಸಿದ ಅವಿನಾಶ್ ಇದು ಪಕ್ಷದ ನಿರ್ಧಾರ, ನನ್ನ ತಂದೆ ಎರಡು ಬಾರಿ ಶಾಸಕರಾಗಿದ್ದಾರೆ,  ರಾಜಕೀಯಕಕ್ಕೆ ಪಾದಾರ್ಪಣೆ ಮಾಡುವ ಮುನ್ನ ನನ್ನ ಎಲ್ಲಾ ಪರೀಕ್ಷೆ ಕ್ಲಿಯರ್ ಮಾಡಿಕೊಳ್ಳಲು ಬಯಸಿದ್ದೆ, ಆದರೆ ಎಲ್ಲವೂ ಇದ್ದಕ್ಕಿಂದಂತೆ ಆಗಿಹೊಯಿತು ಎಂದು ಹೇಳಿದ್ದಾರೆ.
ನನ್ನ ಕುಟುಂಬದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಜಕಾರಣಿಗಳು, ನನ್ನ ಚಿಕ್ಕಪ್ಪ ಪ್ರಕಾಶ್ ರಾಥೋಡ್ ಕಾಂಗ್ರೆಸ್ ಎಂಎಲ್ಸಿ, ನನ್ನ ತಂದೆ ಎರಡಸು ಬಾರಿ ಶಾಸಕರಾಗಿದ್ದವರು. ನನ್ನ ಮತ್ತೊಬ್ಬ ಚಿಕ್ಕಪ್ಪ ಕೂಡ ರಾಜಕಾರಣಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com