'ಕೈ-ಕಮಲ' ಪಾಳಯದಲ್ಲಿ ಅಸಮಾಧಾನ ಬೇಗುದಿ: ತಣ್ಣಗಾಗುತ್ತಿಲ್ಲ ಬಂಡಾಯದ ಕುದಿ

ಕಾಂಗ್ರೆಸ್ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ಗೆ ...

Published: 01st May 2019 12:00 PM  |   Last Updated: 01st May 2019 11:50 AM   |  A+A-


Congress party leaders along with party candidate Kusumavati Shivalli

ಕುಂದಗೋಳದಲ್ಲಿ ಕಾಂಗ್ರೆಸ್ ನಾಯಕರ ಪ್ರಚಾರ

Posted By : SD SD
Source : The New Indian Express
ಬೆಂಗಳೂರು: ಕಾಂಗ್ರೆಸ್ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯಲ್ಲೂ ಅಸಮಾಧಾನ ಕುದಿಯುತ್ತಿದೆ.

ಕುಂದಗೋಳದಲ್ಲಿ ಮಾಜಿ ಶಾಸಕ ಗೋವಿಂದಪ್ಪ ಜುಟ್ಟಾಳ್ ಪುತ್ರ ಚಂದ್ರಶೇಖರ್ ಜುಟ್ಟಾಳ್ ಸೇರಿದಂತೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ,ತಾವು ಕೂಡ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. 

ಅವರೆಲ್ಲಾ ಪ್ರಬಲ ಅಭ್ಯರ್ಥಿಗಳಲ್ಲಾ, ಆದರೂ ಮತಗಳು ವಿಭಜನೆಯಾಗುವ ಭಯ ಕಾಂಗ್ರೆಸ್ ಗೆ ಕಾಡುತ್ತಿದೆ, ಕಳೆದ ಬಾರಿ 600 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು, ಹೀಗಾಗಿ ಚಾನ್ಸ್ ತೆಗೆದುಕೊಳ್ಳಲು ಕಾಂಗ್ರೆಸ್ ತಯಾರಿಲ್ಲ, ಹೀಗಾಗಿ ಜಿಲ್ಲಾ ಮತ್ತು ರಾಜ್ಯ ನಾಯಕರು ಅಸಮಾಧಾನ ಸರಿಪಡಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಲು ಮುಂದಾಗಿದ್ದಾರೆ.

ಇನ್ನೂ ಚಿಂಚೋಳಿಯಲ್ಲೂ ಕಾಂಗ್ರೆಸ್ ಗೆ ಇದೇ ಪರಿಸ್ಥಿತಿ ಎದುರಾಗಿದೆ. ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿ ಶಿವಕುಮಾರ್ ಕೆ, ಕೊಲ್ಲೂರು ಮತ್ತು ಜೆಡಿಎಸ್ ಮುಖಂಡ ಬಸವರಾಜ್ ಮಲ್ಲಯ್ಯ  ಕೂಡ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ, ಆದರೆ ಅವರಿಬ್ಬರನ್ನು ಮನವೊಲಿಸಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇನ್ನೂ ಬಿಜೆಪಿ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ, ಕುಂದಗೋಳ ಮತ್ತು ಚಿಂಚೋಳಿಯಲ್ಲಿ ನಾಯಕರ ಅಸಮಾಧಾನ ಭುಗಿಲೆದ್ದಿದೆ. ಮಾಜಿ ಸಚಿವ ಸುನೀಲ್ ವಲ್ಯಾಪುರೆ ಟಿಕೆಟ್ ಆಕಾಂಕ್ಷಿಯಾಗಿದ್ದರು, ಎಂ.ಆರ್ ಪಾಟೀಲ್ ಟಿಕೆಟ್ ಸಿಗಲಿಲ್ಲವೆಂದು ಅಸಮಾಧಾನ ಗೊಂಡಿದ್ದಾರೆ.ಆದರೆ ತಮಗೆ ಟಿಕೆಟ್ ನೀಡಲು ತಮ್ಮನ್ನು ಪರಿಗಣಿಸಲಿಲ್ಲ ಎಂದು ಬೇಸರಗೊಂಡಿದ್ದಾರೆ, ಆದರೆ ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿದ್ದು,  ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp