ಅವಿನಾಶ್ ಜಾಧವ್ ಗೆ ರಾಜಕೀಯದ ಗಂಧ ಗಾಳಿ ತಿಳಿದಿಲ್ಲ: ಟಿ ಪರಮೇಶ್ವರ್ ನಾಯಕ್

ಉಮೇಶ್ ಜಾಧವ್ ಅವರ ಪುತ್ರ ಎಂಬ ಕಾರಣಕ್ಕಾಗಿ ಬಿಜೆಪಿ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದೆ, ಅವಿನಾಶ್ ಅವರಿಗೆ ರಾಜಯಕೀಯದ ಗಂಧ ಗಾಳಿಯೂ ...

Published: 04th May 2019 12:00 PM  |   Last Updated: 04th May 2019 12:02 PM   |  A+A-


Avinash jadhav

ಅವಿನಾಶ್ ಜಾಧವ್

Posted By : SD SD
Source : The New Indian Express
ಕಲಬುರಗಿ: ಉಮೇಶ್ ಜಾಧವ್ ಅವರ ಪುತ್ರ ಎಂಬ ಕಾರಣಕ್ಕಾಗಿ ಬಿಜೆಪಿ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದೆ, ಅವಿನಾಶ್ ಅವರಿಗೆ ರಾಜಯಕೀಯದ ಗಂಧ ಗಾಳಿಯೂ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ಟಿ ಪರಮೇಶ್ವರ್ ನಾಯಕ್ ವ್ಯಂಗ್ಯವಾಡಿದ್ದಾರೆ.

ಚಿಂಚೋಳಿಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಅವಿನಾಶ್ ಜಾಧವ್ ರಾಜಕೀಯವಾಗಿ ಅನನುಭವಿ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಅವರಿಗೆ ರಾಜಕೀಯವಾಗಿ ತುಂಬಾ ಅನುಭವವಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಉಮೇಶ್ ಜಾಧವ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು, ಆದರು ಅವರು ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ನೂ ಚಿಂಚೋಳಿ ವಿಧಾನಸಭೆ  ಉಪ ಚುನಾವಣೆಯಲ್ಲಿ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಎರಡು ಬ್ಯಾಲಟ್ ಬಾಕ್ಸ್ ಕೊಡಲಾಗುತ್ತದೆ. ಮತದಾರರು ತಮ್ಮ ಅಭ್ಯರ್ಥಿ 2 ಬಾಕ್ಸ್ ಗಳಲ್ಲಿ ಹುಡುಕಿ ಮತಹಾಕಬೇಕಾಗುತ್ತದೆ  ಮೊದಲ ಬಾಕ್ಸ್ ನಲ್ಲಿ 16 ಹೆಸರಿರುತ್ತವೆ, ಎರಡನೇಯ ಬಾಕ್ಸ್ ನಲ್ಲಿ ಕಡೆಯ ಅಭ್ಯರ್ಥಿ ಹೆಸರು ಹಾಗೂ ನೋಟಾ ಇರುತ್ತದೆ 
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp