ಶಿವಳ್ಳಿ ಅವರ ಒಳ್ಳೆಯ ಕೆಲಸಗಳು ಮುಂದುವರಿಯಬೇಕೆಂದರೆ ಅವರ ಪತ್ನಿಗೆ ಮತ ಹಾಕಿ: ಸಿದ್ದರಾಮಯ್ಯ

ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ವಿಷಯವಾಗಿದೆ, ಹೀಗಾಗಿ ನೀವೆಲ್ಲರೂ ಕುಸಮ ಶಿವಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ...

Published: 04th May 2019 12:00 PM  |   Last Updated: 04th May 2019 12:01 PM   |  A+A-


Congress candidate Kusumavati Shivalli with former CM Siddaramaiah

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರುಗಳು

Posted By : SD SD
Source : The New Indian Express
ಹುಬ್ಬಳ್ಳಿ:  ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ವಿಷಯವಾಗಿದೆ, ಹೀಗಾಗಿ ನೀವೆಲ್ಲರೂ ಕುಸಮ ಶಿವಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಸಂಶಿ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಳ್ಳಿ ಅವರ ಪರಂಪರೆ ಮುಂದುವರಿಯಬೇಕಾದರೇ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಮನವಿ ಮಾಡಿದ್ದಾರೆ.

ಮೇ 14 ರಿಂದ ನಾಲ್ಕು ದಿನಗಳ ಕಾಲ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ, ಶಿವಳ್ಳಿ ಅವರು ತಮ್ಮ ಅನಾರೋಗ್ಯದ ನಡುವೆಯೂ ಬಡ ಜನರ ಬಗ್ಗೆ  ಅಪಾರ ಕಾಳಜಿ ವಹಿಸುತ್ದಿದ್ದರು. ಮೋದಿ ಯಾವಾಗಲೂ ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ಆ ಎದೆಯಲ್ಲಿ ಬಡ ಜನರಿಗೆ ಜಾಗವಿಲ್ಲ ಎಂದು ಟೀಕಿಸಿದರು.

ಕುಂದಗೋಳ ಮೈತ್ರಿ ಅಭ್ಯರ್ಥಿ ಶ್ರೀಮತಿ ಕುಸುಮಾ ಶಿವಳ್ಳಿ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ಕರೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ಡಿ,ಕೆ ಶಿವಕುಮಾರ್, ಕುಸುಮಾ ಶಿವಳ್ಳಿ ಅವರ ಪರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೆಲಸ ಮಾಡು್ತಿದ್ದಾರೆ, ಬಿಜೆಪಿ ಕುಂದಗೋಳ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ. 
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp