ಕುಂದಗೋಳದಲ್ಲಿ ಜೆಡಿಎಸ್ -ಕಾಂಗ್ರೆಸ್ ಗೆ ಅನುಕಂಪದ ಅಲೆಯೇ ವೋಟ್ ಬ್ಯಾಂಕ್!

ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷವೂ ಇದುವರೆಗೂ ಪ್ರಬಲವಾಗಿ ಬೇರೂರಿಲ್ಲ, ಹಲವು ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ತಮ್ಮ ಅದೃಷ್ಟ ...

Published: 05th May 2019 12:00 PM  |   Last Updated: 05th May 2019 10:45 AM   |  A+A-


Kusumavati.

ಕುಸುಮಾವತಿ ಶಿವಳ್ಳಿ

Posted By : SD SD
Source : The New Indian Express
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷವೂ ಇದುವರೆಗೂ ಪ್ರಬಲವಾಗಿ ಬೇರೂರಿಲ್ಲ, ಹಲವು ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ.ಇತ್ತೀಚೆಗೆ ಸಚಿವ ಸಿ.ಎಸ್ ಶಿವಳ್ಳಿ ನಿಧನರಾದ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಅನುಕಂಪದ ಅಲೆ ಪ್ರಮುಖವಾಗಿ ಕೆಲಸ ಮಾಡುತ್ತಿದೆ.

1957 ಮತ್ತು 1962 ರಲ್ಲಿ ನಡೆದ ಎರಡು ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ,ಕೆ ಕಂಬಳ್ಳಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು,  ಎಸ್ ಆರ್ ಬೊಮ್ಮಾಯಿ ಎರಡನೇ ಬಾರಿಗೆ ಜಯ ಗಳಿಸಿದ್ದರು.

ನಂತರ ಬೊಮ್ಮಾಯಿ ಕುಂದಗೋಳದಿಂದ ಸ್ಪರ್ಧಿಸುವುದನ್ನು ನಿಲ್ಲಿಸಿ  ಹುಬ್ಬಳ್ಳಿ ಗ್ರಾಮೀಣ ಬಾಗಕ್ಕೆ ಶಿಫ್ಟ್ ಆದರು. ನಂತರ 1988 ರಲ್ಲಿ ಸಿಎಂ ಆದರು. 1985 ರಲ್ಲಿ  ಜನತಾ ಪಾರ್ಟಿ ಮೊದಲ ಬಾರಿಗೆ ಗೆಲುವಿನ ರುಚಿ ಕಂಡಿತು. ನಂತರ ನಡೆದ ಚುನಾವಣೆಯಲ್ಲಿ ಗೋವಿಂದಪ್ಪ ಜುಟ್ಟಾಳ್ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದರು. ಅದಾದ ನಂತರ ಶಿವಳ್ಳಿ ಅವರನ್ನು ಸೋಲಿಸುವ ಮೂಲಕ ಜನತಾ ದಳದ ಮಲ್ಲಿಕಾರ್ಜುನ ಅಕ್ಕಿ ಗೆಲುವು ಸಾಧಿಸಿದ್ದರು.

ಅದಾದ ನಂತರ ಶಿವಳ್ಳಿ ಪಕ್ಷೇತರ ಅಭ್ಯರ್ಥಯಾಗಿ ಸ್ಪರ್ಧಿಸಿ ಜೆಡಿಯು ಮಲ್ಲಿಕಾರ್ಜುನ ಅಕ್ಕಿ ಅವರನ್ನು ಸೋಲಿಸಿದ್ದರು, 2008ರ ಚುನಾವಣೆ ಕ್ಷೇತ್ರದ ಚಿತ್ರಣವನ್ನೇ ಬದಲಿಸಿತು. ಬಿಜೆಪಿಯ ಎಸ್ ಐ ಚಿಕ್ಕಣ್ಣಗೌಡರ್ ಕಲಘಟಕಿಯಿಂದ ಸ್ಪರ್ಧಿಸಿದ್ದರು. ಅದಾದ ನಂತರ ಸತತವಾಗಿ ಶಿವಳ್ಳಿ ಎರಡು ಬಾರಿ ಗೆಲುವು ಸಾಧಿಸಿದ್ದರು,

ಶಿವಳ್ಳಿ ಅವರ ನಿಧನದ ನಂತರ ತೆರವಾಗಿರುವ ಕುಂದಗೋಳ ವಿಧಾನಸಭೆ ಉಪ ಚುನಾವಣೆ ನಡೆಯುತ್ತಿದ್ದು, ಅವರ ಪತ್ನಿ ಶಿವಳ್ಳಿ ಕಣಕ್ಕಿಳಿದಿದ್ದಾರೆ, ಕಾಂಗ್ರೆಸ್ ಮತ್ತೆ ತನ್ನ ಸೀಟು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದು, ಅನುಕಂಪದ ಅಲೆ ಮೇಲೆ ಮತ ಯಾಚಿಸುತ್ತಿದೆ. ಬಿಜೆಪಿ ಕೂಡ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp