ಮುಗಿದ ಮೈತ್ರಿ ಪಕ್ಷಗಳ ಹನಿಮೂನ್: ಮುಂದುವರಿದ ಮುಸುಕಿನ ಗುದ್ದಾಟ!

ಲೋಕಸಭೆ ಚುನಾವಣೆ ಮುಗಿದಿದೆ,ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಮುಸುಕಿನ ಗುದ್ದಾಟ ಮಾತ್ರ ಇನ್ನೂ ಮುಂದುವರಿದಿದೆ, ಎರಡು ಪಕ್ಷಗಳ ...
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದಿದೆ,ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಮುಸುಕಿನ ಗುದ್ದಾಟ ಮಾತ್ರ ಇನ್ನೂ ಮುಂದುವರಿದಿದೆ, ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರ ಅನುಭವಗಳು ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಇದು ಸ್ಥಾನಮಾನದ ಬದಲಾವಣೆ ಆಗುವ ಮುನ್ಸೂಚನೆ ನೀಡಿದೆ.
ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸರಿಯಾದ ಸಮನ್ವಯ ಇಲ್ಲ ಎಂದು ಸಚಿವ ಜಿ,ಟಿ ದೇವೇಗೌಡ ಒಪ್ಪಿಕೊಂಡಿದ್ದಾರೆ, ಕಾಂಗ್ರೆಸ್ ಜೆಡಿಎಸ್ ಕಮಿಟ್ ಮೆಂಟ್ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಲು ಹಿಂಜರಿಯುತ್ತಿದ್ದಾರೆ,  ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಖಂಡರು ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ.
ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಜೆಡಿಎಸ್ ಮುಂದೆ ಬಗ್ಗದಿರಲು ನಿರ್ಧರಿಸಿದ್ದಾರೆ, ಮಂಡ್ಯ  ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ. ಇದನ್ನು ಹೈಕಮಾಂಡ್ ಗೂ ರವಾನಿಸಿದ್ದಾರೆ,.ಫಲಿತಾಂಶ ಹೊರಬರುವ ಮುನ್ನವೇ ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ನವರು ಬೈಯ್ಯುತ್ತಿರುವುದು ಸರಿಯಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ, 
ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ,  ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜೆಡಿಎಸ್ ಒತ್ತಾಯಿಸುತ್ತಿದೆ,. ಕುಮಾರಸ್ವಾಮಿ ಅವರ ಅತಿಯಾದ ಆತ್ಮ ವಿಶ್ವಾಸ ಮಂಡ್ಯ ವಿಷಯವನ್ನು ಮತ್ತಷ್ಟು ಜಟಿಲವಾಗಿಸಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ಶಾಸಕರು ಅಲ್ಲಿನ ಜಿಲ್ಲಾ ಪಂಚಾಯತ್ , ತಾಲೂಕು ಮತ್ತು ಸ್ಥಳೀಯ. ಸಂಸ್ಥೆಗಳ ಮೇಲೆ ಹಿಡಿತ ಹೊಂದಿದ್ದಾರೆ, ಹಾಗಾಗಿ ತಮ್ಮ ಪುತ್ರ ನಿಖಿಲ್ ಗೆಲುವು ಸುಲಭ ಎಂದು ಸಿಎಂ ಕುಮಾರಸ್ವಾಮಿ ಭಾವಿಸಿದ್ದರು, ಆದರೆ ಅದು ಸಾಧ್ಯವಿಲ್ಲ ಎಂದು ಮನವರಿಕೆಯಾದಾಗ ಕುಮಾರಸ್ವಾಮಿ ಕಾಂಗ್ರೆಸ್ ನೆರವು ಕೇಳಿದರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಇನ್ನೂ ನಿಖಿಲ್ ಕುಮಾರ್ ಅಭ್ಯರ್ಥಿಯಾಗಿದ್ದು ಜೆಡಿಎಸ್ ನಲ್ಲೆ ಕೆಲವರಿಗೆ ಇಷ್ಟವಿರಲಿಲ್ಲ, ಯಾವುದೇ ಸಭೆ ನಡೆಸಿ ಎರಡು ಪಕ್ಷದ ಮುಖಂಡರ ಜೊತೆ ಚರ್ಚಿಸಿ ಅಭ್ಯರ್ಥಿ ಹೆಸರು ಘೋಷಿಸಿಲಿಲ್ಲ, ಸಿಎಂ ಕುಮಾರಸ್ವಾಮಿ ತಮ್ಮ ಅಭಿಪ್ರಾಯವನ್ನು ಪರಿಗಣಿಸಲಿಲ್ಲ ಎಂದು ಎಚ್ ಡಿಕೆ ಆಪ್ತರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com