ಲೋಕಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಗೆ ಗೆಲುವಿನ ನಿರೀಕ್ಷೆ; ಸಮೀಕ್ಷೆ ಮಾತ್ರ ಅತಂತ್ರ!

ಲೋಕಸಭೆ ಚುನಾವಣೆಗೆ ಇನ್ನೊಂದು ಹಂತದ ಚುನಾವಣೆ ಮಾತ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯಕ್ಕೆ ಇನ್ನೊಂದು ಹಂತದ ಚುನಾವಣೆ ಮಾತ್ರ ಬಾಕಿ, ಇನ್ನು 10 ದಿನಗಳಲ್ಲಿ ಫಲಿತಾಂಶ ಕೂಡ ಹೊರಬರಲಿದೆ. ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ಫಲಿತಾಂಶದ ದಿನಕ್ಕಾಗಿ ಕಾಯುತ್ತಿವೆ. ಮೇ 23ರ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ನಿರ್ಣಾಯಕ ಫಲಿತಾಂಶ ಬೀರುವ ಸಾಧ್ಯತೆಯಿದೆ.
ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ನ ಮೈತ್ರಿಕೂಟದ ಆಂತರಿಕ ಸಮೀಕ್ಷೆಗಳ ಪ್ರಕಾರ, 2014ರ ಫಲಿತಾಂಶ ಮರುಕಳಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣವಾಗಿದ್ದು ಮೈತ್ರಿ ಸರ್ಕಾರದ ಅಸ್ಥಿತ್ವದ ಬಗ್ಗೆ ಕೂಡ ಸಂಶಯ ಮೂಡುತ್ತಿದೆ.
ಮೈತ್ರಿ ಸರ್ಕಾರಕ್ಕೆ ಲೋಕಸಭೆ ಚುನಾವಣೆ ಫಲಿತಾಂಶದಿಂದ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪದೇ ಪದೇ ಹೇಳುತ್ತಿದ್ದರೂ ಕೂಡ ಪ್ರತಿದಿನ ಮೈತ್ರಿಕೂಟದ ಪಕ್ಷದ ನಾಯಕರ ನಡುವಿನ ಭಿನ್ನಮತ ಸುದ್ದಿಯಾಗುತ್ತಲೇ ಇದೆ.
ತಮಗೆ 28ರಲ್ಲಿ 22 ಸೀಟುಗಳು ನಿರಾಯಾಸವಾಗಿ ಬರುತ್ತದೆ ಎಂದು ಬಿಜೆಪಿ ಒಂದು ಕಡೆ, ಇನ್ನೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಹೇಳುತ್ತಿದ್ದರೂ ಕೂಡ ವಾಸ್ತವ ಆಂತರಿಕ ಸಮೀಕ್ಷೆಗಳು ಹೇಳುವುದೇ ಬೇರೆ. ಬಿಜೆಪಿ 14 ಸೀಟುಗಳು ಗೆಲ್ಲುವ ಸಾಧ್ಯತೆಯಿದ್ದು ಮತ್ತೆ ಮೂರು ಸಂಶಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com