ನಾವೆಲ್ಲರೊ ಒಂದೇ ಕುಟುಂಬದಂತೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

ಬಿಜೆಪಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ, ಕಾಂಗ್ರೆಸ್ ಮತ್ತು ನಾವು ಒಂದೇ ಕುಟುಂಬದವರಿದ್ದಂತೆ, ಬಿಜೆಪಿ ಮಾತನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ...

Published: 14th May 2019 12:00 PM  |   Last Updated: 14th May 2019 11:44 AM   |  A+A-


Chief Minister H D Kumaraswamy in conversation with minister R V Deshpande at a rally

ಪ್ರಚಾರದಲ್ಲಿ ಸಿಎಂ ಕುಮಾರಸ್ವಾಮಿ

Posted By : SD SD
Source : The New Indian Express
ಕುಂದಗೋಳ: ಬಿಜೆಪಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ, ಕಾಂಗ್ರೆಸ್ ಮತ್ತು ನಾವು ಒಂದೇ ಕುಟುಂಬದವರಿದ್ದಂತೆ, ಬಿಜೆಪಿ ಮಾತನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ ದಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ,ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಅಸ್ಥಿರಗೊಳಿಸಲು ಕೇಂದ್ರದ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ  ಎಂದ ಅವರು, ಈ ಚುನಾವಣೆ ಎದುರಾಗಿರುವುದು ಅನಿರೀಕ್ಷಿತ, ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ನಾನು ಮತ್ತು ಶಿವಳ್ಳಿ ಆತ್ಮೀಯರಾಗಿದ್ದೆವು ಎಂದು ಸಿಎಂ ಹೇಳಿದರು.

ಸಚಿವರಾಗಿದ್ದ ಸಿಎಸ್ ಶಿವಳ್ಳಿ ನನ್ನನ್ನು ಭೇಟಿ ಮಾಡಲು ಬಂದಾಗೆಲ್ಲಾ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಸ್ತಾವನೆ ಇರುವ ಪತ್ರ ಹಿಡಿದುಕೊಂಡು ಬರುತ್ತಿದ್ದರು. ಶಿವಳ್ಳಿ ಅವರ ಕುಟುಂಬ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದೆ, ತಮ್ಮ ಪತಿ ಶಿವಳ್ಳಿ ಅವರ ಉತ್ತಮ ಕೆಲಸಗಳನ್ನು ಕುಸುಮಾವತಿ ಅವರು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.

ಮುಂದಿನ ವರ್ಷದಿಂದ ಸರ್ಕಾರ ರೈತ ಸಂಚಾರ ವೆಚ್ಚ ಭರಿಸಲಿದೆ ಎಂದು ಹೇಳಿರುವ ಸಿಎಂ ಸುಮಾರು 60 ಕೋಟಿ ರು ವೆಚ್ಚದಲ್ಲಿ ಜಲಧಾರಾ ಯೋಜನೆ ಅನುಷ್ಠಾನೊಳಿಸುತ್ತೇವೆ ಎಂದು ತಿಳಿಸಿದ್ದಾರೆ, ಇದರಿಂದ ರಾಜ್ಯದ ಪ್ರತಿಯೊಬ್ಬರ ಮನೆಗೂ ನೀರು ಬರಲಿದೆ ಎಂದು ತಿಳಿಸಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp