ಕುಂದಗೋಳದಲ್ಲಿ ಕಾಂಗ್ರೆಸ್ ಗೆ ಅನುಕಂಪದ ಆಸರೆ, ಚಿಂಚೋಳಿಯಲ್ಲಿ 'ಕೈ'ಗೆ ಬರೆ!

ಕುಂದಗೋಳ, ಚಿಂಚೋಳಿ ವಿಧಾನಸಭೆಗೆ ಮೇ 19 ರಂದು ಚುನಾವಣೆ ನಡೆಯಲಿದೆ, ಕಾಂಗ್ರೆಸ್ ಮತ್ತು ಬಿಜೆಪಿ ಕ್ಲೀನ್ ಸ್ವೀಪ್ ಮಾಡುವುದಾಗಿ ಹೇಳುತ್ತಿವೆ...
ಕುಸುಮಾವತಿ ಮತ್ತು ಅವಿನಾಶ್ ಜಾಧವ್
ಕುಸುಮಾವತಿ ಮತ್ತು ಅವಿನಾಶ್ ಜಾಧವ್
ಬೆಂಗಳೂರು: ಕುಂದಗೋಳ, ಚಿಂಚೋಳಿ  ವಿಧಾನಸಭೆಗೆ ಮೇ 19 ರಂದು ಚುನಾವಣೆ ನಡೆಯಲಿದೆ, ಕಾಂಗ್ರೆಸ್ ಮತ್ತು ಬಿಜೆಪಿ ಕ್ಲೀನ್ ಸ್ವೀಪ್ ಮಾಡುವುದಾಗಿ ಹೇಳುತ್ತಿವೆ.  ಮೇ 23 ರಂದು ಫಲಿತಾಂಶ ಬರಲಿದ್ದು, ಅಂದೇ ಎಲ್ಲಾ ಸಾಬೀತಾಗಲಿದೆ.
ಎರಡು ಕ್ಷೇತ್ರಗಳ ಗೆಲವು ಕಾಂಗ್ರೆಸ್ ಗೆ ಅನಿವಾರ್ಯವಾಗಿದೆ, ಕುಂದಗೋಳದಲ್ಲಿ ಕಾಂಗ್ರೆಸ್ ನಿಂದ ಸಿಎಸ್ ಶಿವಳ್ಳಿ ಪತ್ನಿ ಕುಸುಮಾವತಿ ಹಾಗೂ ಬಿಜೆಪಿಯಿಂದ ಚಿಕ್ಕನಗೌಡರ್ ಹಾಗೂ ಚಿಂಚೋಳಿಯಲ್ಲಿ ಬಿಜೆಪಿಯಿಂದ ಅವಿನಾಶ್ ಜಾಧವ್ ಮತ್ತು ಸುಭಾಷ್ ರಾಥೋಡ್ ಕಣಕ್ಕಿಳಿದಿದ್ದಾರೆ.
ಈ ಉಪ ಚುನಾವಣೆ ಆಡಳಿತ ಮತ್ತು ವಿರೋಧ ಪಕ್ಷಕ್ಕೆ ಬಹಳ ಮುಖ್ಯವಾಗಿದೆ, ಈ ಎರಡು ಕ್ಷೇತ್ರಗಳ ಗೆಲವು ಬಿಜೆಪಿದೆ ಪ್ರಮುಖವಾಗಿದೆ, ಮೂಲಗಳ ಪ್ರಕಾರ ಕುಂದಗೋಳದಲ್ಲಿ ಕಾಂಗ್ರೆಸ್ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿಂಚೋಳಿಯಲ್ಲಿ ಕಾಂಗ್ರೆಸ್ ಗೆಲುವು ಮಲ್ಲಿಕಾರ್ಜುನ ಖರ್ಗೆಗೆ ಅನಿವಾರ್ಯವಾಗಿದೆ, ಏಕೆಂದರೇ ಚಿಂಚೋಳಿ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಕಾಂಗ್ರೆಸ್ ಸೋತರ್ ಖರ್ಗೆದ್ವಯರಿಗೆ ಮುಖಭಂಗ ಖಚಿತ.
ಬಿಜೆಪಿಯಲ್ಲಿ ಸದ್ಯ 104 ಶಾಸಕರಿದ್ದು, ಈ ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಕಮಲ ಪಕ್ಷಕ್ಕೆ ವರದಾನವಾಗುತ್ತದೆ, ಬಿಜೆಪಿ ಶಾಸಕರ ಸಂಖ್ಯೆ 106ಕ್ಕೆ ತಲುಪಿದರೇ ಸಮ್ಮಿಶ್ರ ಸರ್ಕಾರದ ಬುಡ ಅಲ್ಲಾಡಲಿದೆ ಎಂಬುದು ಮೈತ್ರಿ ಪಕ್ಷಗಳ ಭಯವಾಗಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ನೀಡಿರುವ ಹೇಳಿಕೆ ದೋಸ್ತಿ ಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. 
ಕಾಂಗ್ರೆಸ್-ಜೆಡಿಎಸ್ ಆಂತರಿಕ ಸಮೀಕ್ಷೆ ಪ್ರಕಾರ, ಚಿಂಚೋಳಿಯಲ್ಲಿ ಜಾತಿ ಸಮೀಕರಣ ಕಾಂಗ್ರೆಸ್ ವಿರುದ್ಧವಾಗಿದೆ, ಲಿಂಗಾಯತ, ಬಂಜಾರ ಇಲ್ಲಿನ ಪ್ರಬಲ ಸಮುದಾಯಗಳಾಗಿವೆ, ಪರಿಶಿಷ್ಟ ಜಾತಿ ಮತ್ತಿತರ ವರ್ಗಗಳು ಬಿಜೆಪಿ ಬೆಂಬಲಿಸಲಿವೆ, ನಾವು ಬಂಜಾರ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ, ಹೀಗಾಗಿ ಬಂಜಾರ ಮತಗಳು ನಮಗೆ ಬೀಳುತ್ತವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಚಿಂಚೋಳಿಯಲ್ಲಿ ಜೆಡಿಎಸ್ ಗೆ ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಬೆಂಬಲವಿಲ್ಲ, ಹೀಗಾಗಿ ಮತ ವರ್ಗಾವಣೆಯಾಗುವ ಸಾಧ್ಯತೆಯಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಢ್ ಗೆ ಇಲ್ಲಿ ಗೆಲುವು ಕಷ್ಟ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಸುಭಾಷ್ ರಾಥೋಡ್ ಚಿಂಚೋಳಿಯವರಲ್ಲ,  ಹೀಗಾಗಿ ಬಂಜಾರ ಸಮುದಾಯ ಉಮೇಶ್ ಜಾಧವ್ ಪುತ್ರ ಅವಿನಾಶ್ ಬೆಂಬಲಕ್ಕೆ ನಿಲ್ಲುತ್ತದೆ, ಬಂಜಾರ ಜೊತೆಗೆ ಲಿಂಗಾಯತ ಸಮುದಾಯದ ಸಾಂಪ್ರಾದಾಯಿಕ ಮತಗಳು ಬಿಜೆಪಿ ಪರವಾಗಿವೆ ಎಂದು ಹೇಳಿದ್ದಾರೆ,
ಇನ್ನೂ ಕುಂದಗೋಳದಲ್ಲಿ ಪರಿಸ್ಥಿತಿ ಭಿನ್ನವಾಗಿದೆ, 12 ತಿಂಗಳ ಹಿಂದೆ ಜೆಡಿಎಸ್6 ಸಾವಿರ ಮತ ಪಡೆದಿತ್ತು, ಜೆಡಿಯು ಅಭ್ಯರ್ಥಿ 7ಸಾವಿರ, ಗಳಿಸಿತ್ತು. ಈ ಬಾರಿ ಈ ಎಲ್ಲಾ ಮತಗಳು ಕಾಂಗ್ರೆಸ್ ಬೆಂಬಲಿಸಲಿವೆ, ಕಾಂಗ್ರೆಸ್ ಗೆ ಅನುಕಂಪದ ಅಲೆಯೇ ಆಸರೆಯಾಗಿದ್ದು, ಕುಸುಮಾವತಿ ಶಿವಳ್ಳಿ ಪರವಾಗಿರುತ್ತದೆ ಎಂದು ಆಂತರಿಕ ಸಮೀಕ್ಷೆ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com