ಪರೀಕ್ಷಿಸುವ ತಾಕತ್ತು ಅವರಿಗಿದ್ದರೆ, ನಮ್ಮವರು ತೋರಿಸುತ್ತಾರೆ: ಡಿಕೆ ಶಿವಕುಮಾರ್

ನರ ಇದೆಯೋ ಸತ್ತಿದೆಯೋ ಎಂಬ ಬಗ್ಗೆ ಪರೀಕ್ಷೆ ಮಾಡುವ ತಾಕತ್ತು ಅವರಿಗಿದ್ದರೇ ನಮ್ಮ ಜನ ತೋರಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ...

Published: 15th May 2019 12:00 PM  |   Last Updated: 15th May 2019 04:41 AM   |  A+A-


D.K Shivakumar

ಡಿ.ಕೆ ಶಿವಕುಮಾರ್

Posted By : SD SD
Source : UNI
ಹುಬ್ಬಳ್ಳಿ: ನರ ಇದೆಯೋ ಸತ್ತಿದೆಯೋ ಎಂಬ ಬಗ್ಗೆ ಪರೀಕ್ಷೆ ಮಾಡುವ ತಾಕತ್ತು ಅವರಿಗಿದ್ದರೇ ನಮ್ಮ ಜನ ತೋರಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದ ಶಿವಕುಮಾರ್ ಕಾಂಗ್ರೆಸ್‍ನವರೆಲ್ಲ ನರ ಸತ್ತವರು ಎಂಬ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ನಮ್ಮ ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಿಸಲಿ. ಆಗ ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತೆ. ಈಶ್ವರಪ್ಪ ಅವರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಯಸ್ಸು. ಈ ರೀತಿ ಕೆಟ್ಟದಾಗಿ ಮಾತನಾಡುವುದೇ ಈಶ್ವರಪ್ಪನ ಸಂಸ್ಕೃತಿ ಎಂದು ತಿರುಗೇಟು ನೀಡಿದರು.

ಮೈತ್ರಿ ಸರ್ಕಾರದಲ್ಲಿರುವ ಅಸಮಾಧಾನದ ಬಗ್ಗೆ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಪತ್ರ ವ್ಯವಹಾರವೂ ಆಗಿಲ್ಲ. ಇದು ಕೇವಲ ವದಂತಿ. ದೋಸ್ತಿ ಸರ್ಕಾರವನ್ನು ಕಿತ್ತೆಸೆಯೋಕೆ ಕಡಲೇಕಾಯಿ ಗಿಡ ಅಲ್ಲ. 20 ಜನ ಶಾಸಕರು ನಮ್ಮ ಜತೆ ಇದ್ದಾರೆ ಎಂದು ಬಿಜೆಪಿ ಅವರು ಹೇಳುತ್ತಾರೆ. ಗೊಂದಲ ಸೃಷ್ಟಿ ಮಾಡೋದೆ ಬಿಜೆಪಿ ಅವರ ಕೆಲಸ ಎಂದು ಕಿಡಿಕಾರಿದರು.

ಮೈತ್ರಿ ಬೇಡ  ಚುನಾವಣೆಗೇ ಹೋಗೋಣ ಎಂದು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದರೆ ನಾವೇನು ಇದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಪ್ರಾರಂಭದಿಂದ ಬಿಜೆಪಿಯವರು ಸರ್ಕಾರದ ಪತನಕ್ಕೆ ಅನೇಕ ಗಡುವು ನೀಡಿದ್ದಾರೆ. ಇವರ ರಾಜಕೀಯ ನೋಡಿ ಅಸಹ್ಯವಾಗುತ್ತಿದೆ. ಅಧಿಕಾರ ಇಲ್ಲದೆ ಇರಲು ಅವರಿಗೆ ಆಗುತ್ತಿಲ್ಲ. ಅಧಿಕಾರ ಇದ್ದಾಗ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಐಟಿ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ. ಕಾನೂನು, ನ್ಯಾಯ ಇದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಮತ್ತು ನ್ಯಾಯದಲ್ಲಿ ತಮಗೆ ನಂಬಿಕೆ ಇದೆ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp