ಸುಳ್ಳು ಅಫಿಡಿವಿಟ್ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಚುನಾವಣಾ ಆಯೋಗ ಕ್ರಮ

ಪ್ರಜ್ವಲ್ ಲೋಕಸಭಾ ಚುನಾವಣೆ ಪ್ರಜ್ವಲ್ ರೇವಣ್ಣ ವಿರುದ್ದದ ಸುಳ್ಳು ಅಫಿಡಿವಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಕುಟುಂಬದಲ್ಲಿ ಚಿಂತೆ ಆರಂಭವಾಗಿದೆ. ...
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ
ಹಾಸನ: ಪ್ರಜ್ವಲ್ ಲೋಕಸಭಾ ಚುನಾವಣೆ  ಪ್ರಜ್ವಲ್ ರೇವಣ್ಣ ವಿರುದ್ದದ  ಸುಳ್ಳು ಅಫಿಡಿವಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡರ ಕುಟುಂಬದಲ್ಲಿ ಚಿಂತೆ ಆರಂಭವಾಗಿದೆ. 
ಪ್ರಜ್ವಲ್ ರೇವಣ್ಣ ಅವರ ಈ ಪ್ರಕರಣ ಈ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂದು ಕುಟುಂಬಸ್ಥರು ಭಾವಿಸಿರಲಿಲ್ಲ, ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುವಂತ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಜೊತೆಗೆ ಆರೋಪ ಸಾಬೀತಾದರೇ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸುಳ್ಳು ಅಫಿಡವಿಟ್ ಬಗ್ಗೆ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ ಹಾಸನದಲ್ಲಿರೋ ಕಲ್ಯಾಣ ಮಂಟಪ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಪಡೆದಿರೋ ಸಾಲದ ಬಗ್ಗೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ಇದೀಗ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಹಾಸನ ಚುನಾವಣಾ ಅಧಿಕಾರಿಗೆ ಆಯೋಗ ಸೂಚನೆ ನೀಡಿದೆ. 
ಅಫಿಡವಿಟ್ ನಲ್ಲಿ ಪ್ರಜ್ವಲ್ 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಮಾತ್ರ ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು 26  ಲಕ್ಷ ರೂ. ಪ್ರಜ್ವಲ್ ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಎಂಎನ್ ಸಿ ಗಳಲ್ಲಿ ಪಾಲದಾರಿಕೆ ಇರುವ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ, ಪ್ರಜ್ವಲ್ ರೇವಣ್ಣ ಎರಡು ಕಂಪನಿಯಲ್ಲಿ ಪಾರ್ಟ್ನರ್ ಶಿಪ್  ಹೊಂದಿದ್ದರು. ಆದರೆ ಅಫಿಡವಿಟ್ ನಲ್ಲಿ ಮರೆಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಎ.ಮಂಜು ದೂರು ಸಲ್ಲಿಸಿದ್ದರು.
ಎಫ್ ಐಆರ್ ದಾಖಲಿಸಲು ಚುನಾವಣಾ ಆಯೋಗ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ತಿಳಿದು ಬಂದಿದೆ, ಪ್ರಜ್ವಲ್ ರೇವಣ್ಣ ವಿರುದ್ಧ ಮುಂದಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಅವರ ವಿರುದ್ಧ ಭ್ರಷ್ಟಾಚಾರದಿಂದ ಬಂದಿರುವುದು ಸಾಬೀತಾದರೆ 6 ವರ್ಷ ಕಾಲ ಪ್ರಜ್ವಲ್ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ತಮ್ಮ ಪ್ರಕಾರ ಪ್ರಜ್ವಲ್ ವಿರುದ್ಧ ಕ್ರಮ ಜರುಗಿಸುವುದು ಖಚಿತ ಎಂದು ಎ.ಮಂಜು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com