ನಮ್ಮಿಂದಲೇ ನಿಮಗೆ ಹೀಗಾಯಿತು: ದೇವೇಗೌಡರ ಎದುರು ಭವಾನಿ ರೇವಣ್ಣ ಗಳಗಳ ಕಣ್ಣೀರು!

ನಮ್ಮಿಂದಲೇ ನಿಮಗೆ ಸೋಲಾಯಿತು, ನಮ್ಮನ್ನು ಕ್ಷಮಿಸಿಬಿಡಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮುಂದೆ ಸೊಸೆ ಭವಾನಿ ರೇವಣ್ಣ ಗಳಗಳನೆ ಅತ್ತಿರುವ ...

Published: 24th May 2019 12:00 PM  |   Last Updated: 24th May 2019 01:32 AM   |  A+A-


Bhavani Revanna

ಭವಾನಿ ರೇವಣ್ಣ

Posted By : SD SD
Source : Online Desk
ಬೆಂಗಳೂರು: ನಮ್ಮಿಂದಲೇ ನಿಮಗೆ ಸೋಲಾಯಿತು, ನಮ್ಮನ್ನು ಕ್ಷಮಿಸಿಬಿಡಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮುಂದೆ ಸೊಸೆ ಭವಾನಿ ರೇವಣ್ಣ ಗಳಗಳನೆ ಅತ್ತಿರುವ ಪ್ರಸಂಗ ನಡೆದಿದೆ. 

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಭವಾನಿ, ನಿಮ್ಮ ಸೋಲಿಗೆ ನಾವೇ ಕಾರಣವಾಗಿಬಿಟ್ಟೆವು, ನಮ್ಮಿಂದ ನಿಮಗೆ ಈ ಸ್ಥಿತಿ ಬಂದು ಎಂದು ಕಣ್ಣೀರುಗರೆದಿದ್ದಾರೆ. ಪ್ರಜ್ವಲ್ ರೇವಣ್ಣ ರಾಜಿನಾಮೆ ನೀಡುತ್ತಾರೆ, ನೀವು ಮತ್ತೆ ಹಾಸನದಿಂದ ಸ್ಪರ್ಧಿಸಿ, ಇಲ್ಲ ಎನ್ನಬೇಡಿ, ಎಂದು ಮನವಿ ಮಾಡಿರುವ ಭವಾನಿ,ಸೋಲು ಗೆಲುವು ಸಹಜ, ಅದಕ್ಕೆಲ್ಲಾ ಎದೆಗುಂದಬಾರದು ಎಂದು ಸಮಾಧಾನ ಹೇಳಿದ್ದಾರೆ,

ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದರು ನಾವು ಸಂಭ್ರಮ ಪಟ್ಟಿಲ್ಲ. ದೇವೇಗೌಡರು ಸೋಲನ್ನು ಕಂಡಿರುವುದು ನಮಗೆ ನೋವಾಗಿದೆ. ಇದರಿಂದ ಕಾರ್ಯಕರ್ತರು ಕೂಡ ಬೇಸರಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗೆಲುವನ್ನು ಸಂಭ್ರಮಿಸಲು ಪ್ರಜ್ವಲ್ ಹಾಗೂ ಕಾರ್ಯಕರ್ತರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತುಮಕೂರಿನಲ್ಲಿ ಆದ ಸೋಲಿನಿಂದ ಎಲ್ಲರಿಗೂ ನೋವಾಗಿದೆ. ನಾವು ಯಾರೂ ಕೂಡ ಗೆಲುವನ್ನು ಆಚರಿಸಿಲ್ಲ ಎಂದು ಭವಾವಿ ತಿಳಿಸಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp