ಮಂಡ್ಯ ರಣಕಣ; ಪಕ್ಷೇತರ ಅಭ್ಯರ್ಥಿ ಪಾಲಾಯಿತೇ ನಿಖಿಲ್ ಕುಮಾರಸ್ವಾಮಿ ಮತಗಳು?

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮತಗಳು ಪಕ್ಷೇತರ ಅಭ್ಯರ್ಥಿಯೊಬ್ಬರ ಪಾಲಾಯಿತೇ ಎಂಬ ಹೊಸದೊಂದು ವಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ.

Published: 24th May 2019 12:00 PM  |   Last Updated: 24th May 2019 11:21 AM   |  A+A-


Loksabha Election 2019: Surprisingly Independent candidate Shashikumar gets 18323 Votes in Mandya Constituency

ಸಂಗ್ರಹ ಚಿತ್ರ

Posted By : SVN SVN
Source : Online Desk
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮತಗಳು ಪಕ್ಷೇತರ ಅಭ್ಯರ್ಥಿಯೊಬ್ಬರ ಪಾಲಾಯಿತೇ ಎಂಬ ಹೊಸದೊಂದು ವಾದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿದೆ.

ಹಾಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಕ್ಷೇತ್ರ ಅದು ಮಂಡ್ಯ ಲೋಕಸಭಾ ಕ್ಷೇತ್ರ. ಇಲ್ಲಿ ಸುಮಲತಾ ಅಂಬರೀಶ್ ಅವರು ತಮ್ಮ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಾರು 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದು, ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಮಂಡ್ಯ ಫಲಿತಾಂಶದ ಕುರಿತು ಎಲ್ಲಡೆ ಬಾರಿ ಚರ್ಚೆಗಳು ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಹಲವರು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

ಈ ಪೈಕಿ ಪಕ್ಷೇತರ ಅಭ್ಯರ್ಥಿಗಳ ಪಾತ್ರದ ಕುರಿತೂ ವ್ಯಾಪಕ ಚರ್ಚೆಯಾಗುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು 18 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೌದು... ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಎಲ್ ಶಶಿಕುಮಾರ್ (ಕ್ರಮಸಂಖ್ಯೆ 17) ಎಂಬುವವರು 18323 ಮತಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.

ಈ ಬಾರಿ ಮಂಡ್ಯದಲ್ಲಿ ಒಟ್ಟು 16 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈ ಪೈಕಿ ಸುಮಲತಾ ಅಂಬರೀಷ್ ಮತ್ತು ಶಶಿಕುಮಾರ್ ಅವರನ್ನು ಹೊರತು ಪಡಿಸಿ ಬೇರಾವುದೇ ಪಕ್ಷೇತರ ಅಭ್ಯರ್ಥಿಯ ಮತಗಳ ಸಂಖ್ಯೆ 10 ಸಾವಿರ ಗಡಿ ದಾಟಿಲ್ಲ. ಆದರೆ ಶಶಿಕುಮಾರ್ ಅವರು ಮಾತ್ರ 18323 ಮತಗಳನ್ನು ಗಳಿಸಿ ಸುದ್ದಿಯಾಗಿದ್ದಾರೆ. 

ಶಶಿಕುಮಾರ್ ಪಾಲಾಯಿತೇ ನಿಖಿಲ್ ಮತಗಳು
ಇನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಬೇಕಾದ ಮತಗಳು ಶಶಿಕುಮಾರ್ ಅವರ ಪಾಲಾಯಿತು ಎಂಬ ಮಾತುಗಳೂ ಕೂಡ ಕೇಳಿ ಬರುತ್ತಿದ್ದು, ಇದಕ್ಕೆ ಕೆಲವರು ಸ್ಪಷ್ಟನೆ ಕೂಡ ನೀಡಿದ್ದಾರೆ. ಪತ್ರಿಕೆಯೊಂದು ವರದಿ ಮಾಡಿರುವಂತೆ ಒಂದು ಮತಯಂತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳ ಹೆಸರು ಸೇರ್ಪಡೆಗೆ ಮಾತ್ರ ಅವಕಾಶವಿದೆ. ಆದರೆ ಈ ಬಾರಿ ಮಂಡ್ಯದಲ್ಲಿ 16 ಮಂದಿ ಪಕ್ಷೇತರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 22 ಮಂದಿ ಸ್ಪರ್ಧೆ ಮಾಡಿದ್ದರು. ಹೀಗಾಗಿ ಚುನಾವಣಾ ಆಯೋಗ ಒಂದು ಮತಯಂತ್ರದ ಬದಲಿಗೆ 2 ಮತ ಯಂತ್ರಗಳನ್ನು ಹಾಕಿತ್ತು. ಆ ಮೂಲಕ ಹೆಚ್ಚುವರಿಯಾಗಿ ಮತ್ತೊಂದು ಮತ ಯಂತ್ರವನ್ನು ಮತದಾನಕ್ಕೆ ಹಾಕಲಾಗಿತ್ತು. 

ನಿಖಿಲ್ ಕುಮಾರ ಸ್ವಾಮಿ ಅವರ ಕ್ರಮ ಸಂಖ್ಯೆ 1 ಆಗಿದ್ದು, ಶಶಿಕುಮಾರ್ ಅವರ ಕ್ರಮ ಸಂಖ್ಯೆ 17 ಆಗಿದೆ. ಮೊದಲ ಮತ ಯಂತ್ರದಲ್ಲಿ 16 ಕ್ರಮ ಸಂಖ್ಯೆಗಳ ಬಳಿಕ ಮತ್ತೊಂದು ಮತಯಂತ್ರದಲ್ಲಿ 17ನೇ ಕ್ರಮ ಸಂಖ್ಯೆಯಿಂದ ಹೆಸರು ಜೋಡಣೆ ಮಾಡಲಾಗಿತ್ತು. ಆ ಮೂಲಕ ಶಶಿಕುಮಾರ್ ಅವರು 2ನೇ ಮತಯಂತ್ರದಲ್ಲಿ ಮೊದಲಿಗರಾಗಿದ್ದರು. ಇದೇ ಕಾರಣಕ್ಕೆ ಮತದಾರರು ಗೊಂದಲಗೊಂಡು ನಿಖಿಲ್ ಗೆ ಹಾಕಬೇಕಿದ್ದ ಮತಗಳನ್ನು ಶಶಿಕುಮಾರ್ ಅವರಿಗೆ ಹಾಕಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಶಶಿಕುಮಾರ್ ಅವರಿಗೆ ಈ ಪರಿ ಮತಗಳು ಬಂದಿವೆ  ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
Stay up to date on all the latest ಕರ್ನಾಟಕ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp