ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ನಷ್ಟ: ಬಿಜೆಪಿಗೆ ಲಾಭ; ಇಬ್ಬರ ಜಗಳ ಮೂರನೇಯವರಿಗೆ?

ಒಮ್ಮೆ ಸ್ನೇಹಿತರು ಮತ್ತೆ ಶತ್ರುಗಳು ಹಾಗೂ ಮತ್ತೆ ಸ್ನೇಹಿತರಾಗಿದ್ದಾರೆ, ಕಡೇ ಪಕ್ಷ ಸಾರ್ವಜನಿಕವಾಗಿ ಯಾದರೂ ಮೈತ್ರಿ ಪಕ್ಷದ ಮುಖಂಡರು ಜೊತೆಯಾಗಿ ...
ಸಿದ್ದರಾಮಯ್ಯ ಮತ್ತು ಎಚ್.ಡಿ ದೇವೇಗೌಡ
ಸಿದ್ದರಾಮಯ್ಯ ಮತ್ತು ಎಚ್.ಡಿ ದೇವೇಗೌಡ
ಬೆಂಗಳೂರು: ಒಮ್ಮೆ ಸ್ನೇಹಿತರು ಮತ್ತೆ  ಶತ್ರುಗಳು ಹಾಗೂ ಮತ್ತೆ ಸ್ನೇಹಿತರಾಗಿದ್ದಾರೆ, ಕಡೇ ಪಕ್ಷ ಸಾರ್ವಜನಿಕವಾಗಿಯಾದರೂ  ಮೈತ್ರಿ ಪಕ್ಷದ ಮುಖಂಡರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇಬ್ಬರು ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ, ಇಬ್ಬರ ರಾಜಕೀಯ ತಂತ್ರಗಾರಿಕೆಗಳಿಂದ ಇಬ್ಬರು ಸೋಲನುಭವಿಸಿದ್ದಾರೆ.
ಚುನಾವಣಾ ರಾಜಕೀಯದಂತೆ ಕುರುಬ ಮತಗಳು ಜೆಡಿಎಸ್ ಗೆ ಹೋಗಬಾರದು ಎಂದು ಸಿದ್ದರಾಮಯ್ಯ ನಿರ್ಧರಿಸಿದ್ದರು,ಒಕ್ಕಲಿಗ ಮತಗಳು ಕಾಂಗ್ರೆಸ್ ಗೆ ಹೋಗಬಾರದು ಎಂದು ದೇವೇಗೌಡರು ನಿರ್ಧರಿಸಿದ್ದರು. ಇದರ ಜೊತೆಗೆ ಎರಡು ಪಕ್ಷಗಳ ಕಾರ್ಯಕರ್ತರು ಕೂಡ ಪರಸ್ಪರ ಮತಗಳ ವರ್ಗಾವಣೆ ಮಾಡುವಲ್ಲಿ ಕೈಕೊಟ್ಟಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಭಿನ್ನಮತ ಬಿಜೆಪಿಗೆ ಲಾಭವಾಗಿದೆ, ಹೀಗಾಗಿ ಬಿಜೆಪಿ 25 ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ವೀರಪ್ಪ ಮೊಯ್ಲಿ ಸ್ಪರ್ಧಿಸಿದ್ದ ಚಿಕ್ಕಬಳ್ಳಾಪುರ, ಕೋಲಾರದಿಂದ ಸ್ಪರ್ಧಿಸಿದ್ದ ಕೆ.ಎಚ್ ಮುನಿಯಪ್ಪ ಸೋತಿದ್ದಾರೆ. 
ಕಾಂಗ್ರೆಸ್ - ಜೆಡಿಎಸ್ ಪರಸ್ಪರ ಹೊಂದಾಣಿಕೆಯಾಗದ ಕಾರಣ ತುಮಕೂರಿನಲ್ಲಿ ದೇವೇಗೌಡರು ಸೋತರು, ಪ್ರತಿಯಾಗಿ ಬಿಜೆಪಿಯ ಜಿಎಸ್ ಬಸವರಾಜ್ ಗೆಲುವು ಕಂಡಿದ್ದಾರೆ. ಮೈಸೂರಿನಲ್ಲಿ ಕೈ-ತೆನೆ ಕಾರ್ಯಕರ್ತರ ಕಿತ್ತಾಟದಿಂದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ವಿರುದ್ಧ ಪ್ರತಾಪ್ ಸಿಂಹ ಗೆಲುವು ಸಾಧಿಸಿದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ಗಾದೆ ಮಾತು ಈ ಲೋಕಸಭೆ ಚುನಾವಣೆ ಫಲಿತಾಂಶದಿಂದ ನಿಜವಾಗಿದೆ.
ಎಲ್ಲಾ ಕ್ಷೇತ್ರಗಳ ಸಮೀಕ್ಷೆ ನಡೆಸಿದ್ದು, ಕೇವಲ ಶಿವಮೊಗ್ಗದಲ್ಲಿ ಮಾತ್ರ ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಬಂದಿವೆ, ಅದು ಡಿಕೆ ಶಿವಕುಮಾರ್ ಕಾರಣದಿಂದಾಗಿ, ಶಿವಮೊಗ್ಗ ಲೋಕಸಭೆ ಕ್ಷೇತ್ರದ ಉಸ್ತುವಾರಿಯನ್ನು ಡಿ.ಕೆ ಶಿವಕುಮಾರ್ ವಹಿಸಿಕೊಂಡಿದ್ದರು. 
ಸಿದ್ದರಾಮಯ್ಯ ಮತ್ತು ದೇವೇಗೌಡ ಇಬ್ಬರು ಜನತಾ ದಳ ಶಾಲೆಯ ಹಳೇಯ ವಿದ್ಯಾರ್ಥಿಗಳು. ಇಬ್ಬರಿಗೂ ಪರಸ್ಪರರ ಬಗ್ಗೆ ತುಂಬಾ ಅರಿವಿದೆ,  ಸುಮಾರು 3 ದಶಕಗಳ ಕಾಲ ಒಟ್ಟಿಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com