ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಾಜಿ ದೇವದಾಸಿಯರು, ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ
3 ಇಲಾಖೆಗಳಿಂದ 1,62,000 ಕೋಟಿ ತೆರಿಗೆ ಹಣ ಸಂಗ್ರಹದ ಗುರಿ
ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಡಯಾಲಿಸ್ ಕೇಂದ್ರ ಸ್ಥಾಪನೆ. ಒಟ್ಟು 219 ಡಯಾಲಿಸಿಸ್ ಸೆಂಟರ್ ನಿರ್ಮಾಣ
10 ನೇ ತರಗತಿವರೆಗೆ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಮೊಟ್ಟೆ ಭಾಗ್ಯ
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು 240 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ
ಎಪಿಎಂಸಿ ಕಾಯ್ದೆ ಹಿಂತೆಗೆತ ಘೋಷಣೆ
ಎತ್ತಿನ ಹೊಳೆ ಎತ್ತಿನ ಹೊಳೆ ಯೋಜನೆಗೆ ಪರಿಷ್ಕೃತ 22,252 ಕೋಟಿ ಮೀಸಲುಯೋಜನೆಗೆ ಪರಿಷ್ಕೃತ 22,252 ಕೋಟಿ ಮೀಸಲು
70 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿಯಲ್ಲಿ ತಾಯಿ-ಮಗು
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು
ಕೊಪ್ಪಳ, ಕಾರವಾರ ಕೊಡಗು ಜಿಲ್ಲಾ ಆಸ್ಪತ್ರೆ ಉನ್ನತೀಕರಣ
ಮೈಸೂರು, ಕಲಬುರಗಿ ಬೆಳಗಾವಿಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಹೈಟೆಕ್ ಹಾರ್ವೆಸ್ಟರ್ ಯೋಜನೆ
ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
ಬ್ರ್ಯಾಂಡ್ ಬೆಂಗಳೂರುಗೆ 45000 ಕೋಟಿ ರೂಪಾಯಿ ಅನುದಾನ, ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ ಯೋಜನೆಗಳ ಘೋಷಣೆ
5 ಗ್ಯಾರೆಂಟಿ ಯೋಜನೆಗೆ 52,000 ಕೋಟಿ ರೂಪಾಯಿ
ಇಂದಿರಾ ಕ್ಯಾಂಟೀನ್ ಗೆ 100 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆಗೆ 10,143 ಕೋಟಿ ರೂಪಾಯಿ ಅನುದಾನ
ನಮ್ಮ ಮೆಟ್ರೋಗೆ 30 ಸಾವಿರ ಕೋಟಿ ರೂಪಾಯಿ
ಕೃಷಿ ಉದ್ಯಮ ಉತ್ತೇಜಿಸಲು ನವೋದ್ಯಮ ಯೋಜನೆಗೆ 10 ಕೋಟಿ ರೂಪಾಯಿ
ಅನುಗ್ರಹ ಯೋಜನೆ ಮರು ಜಾರಿ
75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ
ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ವ್ಯವಸ್ಥೆಗೆ 10 ಕೋಟಿ ರೂಪಾಯಿ
ಅಬಕಾರಿ ತೆರಿಗೆ ಶೇ.20 ರಷ್ಟು ಹೆಚ್ಚಳ
ಜನರು ಬುದ್ಧಿವಂತರು; ಜನರು ಪ್ರಜ್ಞಾವಂತರು. ವಿಪಕ್ಷಗಳ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.
ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ; ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ- ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ
ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆ ಎಂದು ಟೀಕಿಸುವವರು ಬಡವರ ಜೀವನವನ್ನು ನೋಡಲಿ, ಜನರ ಕನಸುಗಳಿಗೆ ರೆಕ್ಕೆ ಮೂಡಿಸುವ ಕೆಲಸ ಮಾಡಿದ್ದೇವೆ.
3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ
14ನೇ ಬಾರಿ ರಾಜ್ಯ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
2023-24ನೇ ಸಾಲಿನ ರಾಜ್ಯ ಬಜೆಟ್: ಸಚಿವ ಸಂಪುಟ ಸಭೆ ಮುಕ್ತಾಯ, ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ಆರಂಭ.
ಸಿಎಂ ಸಿದ್ದರಾಮಯ್ಯಗೆ ಬಜೆಟ್ ಸೂಟ್ಕೇಸ್ ಹಸ್ತಾಂತರಿಸಿದ ಆರ್ಥಿಕ ಇಲಾಖೆ ಅಧಿಕಾರಿಗಳು
ಇನ್ನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 7ರಂದು ಶುಕ್ರವಾರ ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಮಂಡಿಸುತ್ತಿರುವ 14ನೇ ಬಜೆಟ್ ಇದಾಗಿದೆ.