ಛೋಲೆ ಭಟೂರೆ

ರುಚಿಕರವಾದ ಛೋಲೆ ಭಟೂರೆ ಮಾಡುವ ವಿಧಾನ...
ಛೋಲೆ ಭಟೂರೆ
ಛೋಲೆ ಭಟೂರೆ
ಛೋಲೆಗೆ ಬೇಕಾಗುವ ಪದಾರ್ಥಗಳು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಪಲಾವ್ ಎಲೆ - 2-3
  • ಚಕ್ಕೆ- 2-3
  • ಜೀರಿಗೆ- ಅರ್ಧ ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ಅರಿಶಿನ- ಕಾಲು ಚಮಚ
  • ದನಿಯಾ ಪುಡಿ - ಮುಕ್ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಗರಂ ಮಸಾಲೆ ಪುಡಿ - 1 ಚಮಚ
  • ಆಮ್ ಚೂರ್ ಪುಡಿ- 1 ಚಮಚ
  • ಕಾಬುಲ್ ಕಡಲೆಕಾಳು- ನೆನೆಸಿದ್ದು 1 ಬಟ್ಟಲು
  • ಭಟೂರೆಗೆ ಬೇಕಾಗುವ ಪದಾರ್ಥಗಳು
  • ಮೈದಾಹಿಟ್ಟು- 1 ಬಟ್ಟಲು
  • ರವೆ- 1 ಚಮಚ
  • ಸಕ್ಕರೆ- 1 ಚಮಚ
  • ಉಪ್ಪು-  ರುಚಿಗೆ ತಕ್ಕಷ್ಟು
  • ಬೇಕಿಂಗ್ ಪೌಡರ್- ಅರ್ಧ ಚಮಚ
  • ಅಡುಗೆ ಸೋಡ- ಸ್ವಲ್ಪ
  • ಮೊಸರು- 1 ಬಟ್ಟಲು
ಮಾಡುವ ವಿಧಾನ...
  • ಕುಕ್ಕರ್'ನ್ನು ಒಲೆಯ ಮೇಲಿಟ್ಟು ಅದಕ್ಕೆ 1 ಚಮಚ ಎಣ್ಣೆ, ಪಲಾವ್ ಎಲೆ, ಚಕ್ಕೆ, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ಈರುಳ್ಳಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಇದಕ್ಕೆ ಅಚ್ಚ ಖಾರದ ಪುಡಿ, ಅರಿಶಿನ, ದನಿಯಾ ಪುಡಿ, ಉಪ್ಪು, ಗರಂ ಮಸಾಲೆ ಪುಡಿ, ಆಮ್ ಚೂರ್ ಪುಡಿ, ಕಾಬುಲ್ ಕಡಲೆಕಾಳು ಹಾಕಿ 3-4 ಕೂಗು ಕೂಗಿಸಿಕೊಂಡರೆ ಛೋಲೆ ಸಿದ್ಧಗೊಳ್ಳುತ್ತದೆ. 
  • ಭಟೂರೆ ತಯಾರಿಸಲು ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ರವೆ, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಮೊಸರು ಹಾಕಿ ಚೆನ್ನಾಗಿ ನಾದಿಕೊಂಡು ಹಿಟ್ಟು ತಯಾರು ಮಾಡಿಕೊಳ್ಳಬೇಕು. ಹಿಟ್ಟು 2-3 ಗಂಟೆಗಳ ಕಾಲ ನೆನೆಯಲು ಬಿಡಬೇಕು. 
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ಪೂರಿಯಂತೆ ದೊಡ್ಡ ಆಕಾರದಲ್ಲಿ ಲಟ್ಟಿಸಿಕೊಂಡು ಕಾದ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ, ರುಚಿಕರವಾದ ಛೋಲೆ ಭಟೂರೆ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com