ಟೊಮೆಟೊ ಪುಲಾವ್

ಟೊಮಾಟೊ ಪುಲಾವ್ ಗ ರಾಯತಾ ತಯಾರಿಸಿ ಸೇರಿಸಿ ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಈ ಪುಲಾವ್ ಗೆ ...
ಟೊಮೆಟೊ ಪುಲಾವ್
ಟೊಮೆಟೊ ಪುಲಾವ್
ಬೇಕಾಗುವ ಸಾಮಾಗ್ರಿಗಳು
ತುಪ್ಪ- 2 ಚಮಚ
ಮಸಾಲೆ ಪದಾರ್ಥಗಳು -ಸ್ವಲ್ಪ
ಗೇರುಬೀಜ-ಸ್ವಲ್ಪ
ಬೆಳ್ತಕ್ಕಿ - 1 ಕಪ್
ಟೊಮೆಟೊ- 4
ಈರುಳ್ಳಿ-2
ಬಟಾಣಕಾಳು-ಸ್ವಲ್ಪ
ಅರಶಿನ ಪುಡಿ-1/4 ಚಮಚ
ಧನಿಯಾ ಪುಡಿ-1 ಚಮಚ
ಕಾಶ್ಮೀರಿ ಮೆಣಸು ಪುಡಿ-1 ಚಮಚ
ಉಪ್ಪು-1ಚಮಚ
ಸಕ್ಕರೆ-1/2 ಚಮಚ
ಶುಂಠಿ, ಬೆಳ್ಳುಳ್ಳಿ-ಸ್ವಲ್ಪ
ಹಸಿಮೆಣಸು-4
ನೀರು-ಒಂದೂವರೆ ಕಪ್
ಕೊತ್ತಂಬರಿ ಸೊಪ್ಪು-ಸ್ವಲ್ಪ
ಪುದೀನಾ ಸೊಪ್ಪು-ಸ್ವಲ್ಪ
ಮಾಡುವ ವಿಧಾನ
ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಸಿಡಿ. ಅಕ್ಕಿಯನ್ನು ನೆನೆಸಿಟ್ಟರೆ ಅದು ಚೆನ್ನಾಗಿ ಬೇಯುತ್ತದೆ.
ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು, ಕಾಶ್ಮೀರಿ ಕೆಂಪು ಮೆಣಸು ಮತ್ತು ಗೋಡಂಬಿಯನ್ನು ಮಿಕ್ಸಿ ಜಾರ್ ನಲ್ಲಿ ನುಣ್ಣಗೆ ರುಬ್ಬಿ ಪಕ್ಕದಲ್ಲಿಡಿ.
ಕಡಾಯಿ ಅಥವಾ ಬೇರೆ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ. ಅದಕ್ಕೆ ಮಸಾಲೆ ಪದಾರ್ಥ ಮತ್ತು ಇಡಿ ಗೋಡಂಬಿಯನ್ನು ಸೇರಿಸಿ ಹುರಿಯಿರಿ. ಅದಕ್ಕೆ ಪೇಸ್ಟ್ ಮಾಡಿಟ್ಟ ವಸ್ತುಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯುತ್ತಿರಿ.
ನಂತರ ಅದಕ್ಕೆ ಹೆಚ್ಚಿಟ್ಟ ಈರುಳ್ಳಿ, ಬಟಾಣಿ ಕಾಳು ಸೇರಿಸಿ ಹುರಿಯಿರಿ. ನಂತರ ಈ ಮಿಶ್ರಣಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ. 30 ಸೆಕೆಂಡು ಹುರಿಯಿರಿ.
ಈಗ ಹೆಚ್ಚಿ ಇಟ್ಟ ಟೊಮಾಟೊವನ್ನು ಸೇರಿಸಿ ಕಡಾಯಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಎಲ್ಲವನ್ನೂ ಬಿಸಿ ಮಾಡಿ. ಟೊಮಾಟೊ ಸ್ವಲ್ಪ ಮೃದುವಾಗಲಿ. ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಸೇರಿಸಿ. ಈಗ ಮಸಾಲೆ ಸಿದ್ದವಾಗಿದೆ.
ಇದಕ್ಕೆ ನೀರಿನಲ್ಲಿ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಬೇಕಾದಷ್ಟು ನೀರು ಹಾಕಿ.ಸ್ವಲ್ಪ ಹೊತ್ತು ಕುದಿಯಲು ಬಿಟ್ಟು ಪ್ರೆಶರ್ ಮುಚ್ಚಲು ಮುಚ್ಚಿ, ಒಂದು ಕೂಗು ಬರುವವರೆಗೆ ಬಿಸಿ ಮಾಡಿ. ಕುಕ್ಕರ್ ನಿಂದ ಗ್ಯಾಸ್ ಹೋದ ಮೇಲೆ ತೆರೆದು ಬಿಸಿ ಬಿಸಿ ತಿನ್ನಲು ನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com