ಮಂಗಳೂರು ಸ್ಪೆಷಲ್ ಚಿಕನ್ ಕರ್ರಿ

ಮಂಗಳೂರು ಸ್ಪೆಷಲ್ ಚಿಕನ್ ಕರ್ರಿ ಮಾಡುವ ವಿಧಾನ...
ಮಂಗಳೂರು ಚಿಕನ್ ಕರ್ರಿ
ಮಂಗಳೂರು ಚಿಕನ್ ಕರ್ರಿ
ಬೇಕಾಗುವ ಪದಾರ್ಥಗಳು
  • ಬ್ಯಾಡಗಿ ಮೆಣಸಿನಕಾಯಿ-5-6
  • ದನಿಯಾ- ಅರ್ಧ ಚಮಚ
  • ಜೀರಿಗೆ- ಅರ್ಧ ಚಮಚ
  • ಕಾಳು ಮೆಣಸು- ಅರ್ಧ ಚಮಚ
  • ಎಣ್ಣೆ - ಸ್ವಲ್ಪ
  • ಈರುಳ್ಳಿ- 2-3
  • ಬೆಳ್ಳುಳ್ಳಿ- 10 ಎಸಳು
  • ತೆಂಗಿನ ತುರಿ- ಅರ್ಧ ಬಟ್ಟಲು
  • ಅರಿಶಿನ ಪುಡಿ - ಸ್ವಲ್ಪ
  • ಕೋಳಿ ಮಾಂಸ- 300 ಗ್ರಾಂ
  • ತುಪ್ಪ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ತೆಂಗಿನ ಹಾಲು- 3/4 ಬಟ್ಟಲು
  • ನಿಂಬೆ ರಸ - 1 ಚಮಚ
  • ಗರಂ ಮಸಾಲಾ ಪುಡಿ - 1 ಚಮಚ
ಮಾಡುವ ವಿಧಾನ...
  • ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಅದಕ್ಕೆ ಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ದನಿಯಾ ಹಾಕಿ ಚೆನ್ನಾಗಿ ಹುರಿದು ಜಾರ್ ಹಾಕಿಕೊಳ್ಳಬೇಕು. ಇದೇ ಬಾಣಲೆಯಲ್ಲಿಯೇ ತೆಂಗಿನ ತುರಿ. ಈರುಳ್ಳು, ಬೆಳ್ಳುಳ್ಳು ಹಾಕಿ ಕೆಂಪಗೆ ಹುರಿದು, ಅರಿಶಿನದ ಪುಡಿಯೊಂದಿಗೆ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 
  • ನಂತರ ಬಾಣಲೆಗೆ ಸ್ವಲ್ಪ ಎಣ್ಣೆ  ಹಾಗೂ ತುಪ್ಪವನ್ನು ಹಾಕಿ ಕಾದ ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಚೆನ್ನಾಗಿ ತೊಳೆದ ಕೋಳಿ ಮಾಂಸ ಹಾಗೂ ಉಪ್ಪು ಹಾಕಿ 10 ನಿಮಿಷ ಬೇಯಿಸಿಕೊಳ್ಳಬೇಕು. 
  • ಮಾಂಸ ಬೆಂದ ಬಳಿಕ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬಿಡಬೇಕು. ನಂತರ ತೆಂಗಿನ ಹಾಲು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ಪ್ಯಾನ್'ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದು ಗರಂ ಮಸಾಲಾ ಹಾಕಬೇಕು. ಇದನ್ನು ಈಗಾಗಲೇ ಕುದಿಯುತ್ತಿರುವ ಕರ್ರಿಗೆ ಹಾಕಿ 1 ನಿಮಿಷ ಕುದಿಸಿದರೆ, ರುಚಿಕರವಾದ ಮಂಗಳೂರು ಸ್ಪೆಷಲ್ ಚಿಕನ್ ಕರ್ರಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com