ಹೆಸರು ಬೇಳೆ ಲಾಡು

ರುಚಿಕರವಾದ ಹೆಸರು ಬೇಳೆ ಲಾಡು ಮಾಡುವ ವಿಧಾನ...
ಹೆಸರು ಬೇಳೆ ಲಾಡು
ಹೆಸರು ಬೇಳೆ ಲಾಡು
ಬೇಕಾಗುವ ಪದಾರ್ಥಗಳು
  • ಹೆಸರು ಬೇಳೆ- 1 ಬಟ್ಟಲು
  • ತುಪ್ಪು- 1/4 ಬಟ್ಟಲು
  • ಸಕ್ಕರೆ- 1/4 ಬಟ್ಟಲು
  • ಏಲಕ್ಕಿ - 3-4
  • ಗೋಡಂಬಿ, ಬಾದಾಮಿ- ಸಣ್ಣಗೆ ಕತ್ತರಿಸಿದ್ದು ಅರ್ಧ ಬಟ್ಟಲು
  • ಪಿಸ್ತಾ- ಸ್ವಲ್ಪ (ಅಲಂಕಾರಕ್ಕೆ)
ಮಾಡುವ ವಿಧಾನ...
  • ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಪಾತ್ರಗೆ ಹಾಕಿಡಬೇಕು. 
  • ನಂತರ ಸಕ್ಕರೆ ಹಾಗೂ ಏಲಕ್ಕಿಯನ್ನು ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಪುಡಿ ಮಾಡಿಕೊಂಡ ಹೆಸರು ಬೇಳೆ ಪುಡಿ ಹಾಕಿ ಅದಕ್ಕೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಚೆನ್ಮಾಗಿ ಮಿಶ್ರಣ ಮಾಡಿ 10 ನಿಮಿಷ ಕೈಯಾಡಿಸಬೇಕು. ನಂತರ ಇದನ್ನು ಪಾತ್ರೆಯೊಂದಕ್ಕೆ ಹಾಕಿ ಬಾದಾಮಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು 
  • ಬಳಿಕ ಈಗಾಗಲೇ ಪುಡಿ ಮಾಡಿಕೊಂಡ ಸಕ್ಕರೆ ಹಾಗೂ ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅಂಗೈಗೆ ಸ್ವಲ್ಪ ತುಪ್ಪ ಹಾಕಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಮಧ್ಯೆ ಪಿಸ್ತಾ ಇಟ್ಟರೆ ರುಚಿಕರ ಹಾಗೂ ಆರೋಗ್ಯಕರವಾದ ಹೆಸರು ಬೇಳೆ ಲಾಡು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com