ಚಿಕನ್ ಲಾಲಿಪಾಪ್

ರುಚಿಕರವಾದ ಚಿಕನ್ ಲಾಲಿಪಾಪ್ ಮಾಡುವ ವಿಧಾನ...

Published: 03rd December 2019 12:12 PM  |   Last Updated: 03rd December 2019 12:12 PM   |  A+A-


Chicken Lollipop

ಚಿಕನ್ ಲಾಲಿಪಾಪ್

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಚಿಕನ್ ವಿಂಗ್ಸ್- 12-13 ಪೀಸ್
 • ಉಪ್ಪು- ಅರ್ಧ ಚಮಚ
 • ಕಾಳು ಮೆಣಸಿನ ಪುಡಿ - ಸ್ವಲ್ಪ
 • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
 • ಸೋಯಾ ಸಾಸ್- 1 ಚಮಚ
 • ಅಚ್ಛ ಖಾರದಪುಡಿ- 1 ಚಮಚ
 • ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು
 • ಮೈದಾ ಹಿಟ್ಟು- ಅರ್ಧ ಬಟ್ಟಲು
 • ಬೆಳ್ಳುಳ್ಳು ಪುಡಿ- ಅರ್ಧ ಚಮಚ
 • ಎಣ್ಣೆ- ಕರಿಯಲು ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

 • ಮೊದಲು ಚಿಕನ್'ನ್ನು ಚೆನ್ನಾಗಿ ತೊಳೆದು ನಿಧಾನವಾಗಿ ಲಾಲಿಪಾಪ್ ರೀತಿಯಲ್ಲಿ ಮೂಳೆಯನ್ನು ಮಧ್ಯೆ ಇರಿಸಿ ಚಿಕನ್'ನ್ನು ಮುಂದಕ್ಕೆ ಚಾಕುವಿನಿಂದ ತಳ್ಳಿ ಲಾಲಿಪಾಪ್ ರೀತಿ ತಯಾರಿಸಿಕೊಳ್ಳಬೇಕು. 
 • ನಂತರ ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 15 ನಿಮಿಷ ನೆನೆಯಲು ಬಿಡಬೇಕು. 
 • ಮತ್ತೊಂದು ಪಾತ್ರೆಗೆ ಜೋಳದ ಹಿಟ್ಟು, ಮೈದಾಹಿಟ್ಟು, ಬೆಳ್ಳುಳ್ಳಿ ಪುಡಿ, ಅಚ್ಛ ಖಾರದ ಪುಡಿ, ಉಪ್ಪು ಹಾಗೂ ನೀರು ಹಾಕಿ ಸ್ವಲ್ಪ ಬೋಂಡಾ ಮಾಡುವ ಹದಕ್ಕೆ ಕಲಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಚೆನ್ನಾಗಿ ಕಾಯಲು ಬಿಡಬೇಕು. 
 • ಇದಕ್ಕೆ ಈಗಾಗಲೇ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ, ಎಣ್ಣೆಯಲ್ಲಿ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಚಿಕನ್ ಲಾಲಿಪಾಪ್ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news with The Kannadaprabha App. Download now
facebook twitter whatsapp