ಎಲೆಕೋಸು ಮಸಾಲೆ ವಡೆ

ರುಚಿಕರವಾದ ಎಲೆಕೋಸು ಮಸಾಲೆ ವಡೆ ಮಾಡುವ ವಿಧಾನ...
ಎಲೆಕೋಸು ಮಸಾಲೆ ವಡೆ
ಎಲೆಕೋಸು ಮಸಾಲೆ ವಡೆ

ಬೇಕಾಗುವ ಪದಾರ್ಥಗಳು

  • ಕಡಲೆಬೇಳೆ- 3/4 ಬಟ್ಟಲು
  • ಉದ್ದಿನ ಬೇಳೆ- 1/4 ಬಟ್ಟಲು
  • ತೊಗರಿಬೇಳೆ- 1/4 ಬಟ್ಟಲು
  • ತುರಿದ ಎಲೆಕೋಸು- 2 ಬಟ್ಟಲು
  • ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಸಬ್ಬಕ್ಕಿ ಸೊಪ್ಪು- - ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಕರಿಬೇವು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಜೀರಿಗೆ- 1 ಚಮಚ
  • ಇಂಗು-ಚಿಟಿಕೆಯಷ್ಟು
  • ಉಪ್ಪು-ರುಚಿಗೆ ತಕ್ಕಷ್ಟು
  • ಎಣ್ಣೆ-ಕರಿಯಲು

ಮಾಡುವ ವಿಧಾನ...

  • ಮೊದಲು ತೊಗರಿಬೇಳೆ, ಕಡಲೆಬೇಳೆ, ಉದ್ದಿನಬೇಳೆಯನ್ನು ತೊಳೆದು 2 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ನಂತರ ನೀರು ಹಾಕದೆ ಬೇಳೆಯನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು. 
  • ರುಬ್ಬಿಕೊಂಡ ಬೇಳೆಗೆ ತುರಿದ ಎಲೆಕೋಸು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಸಬ್ಬಕ್ಕಿ ಸೊಪ್ಪು, ಕರಿಬೇವು, ಜೀರಿಗೆ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ ವಡೆ ರೀತಿ ತಟ್ಟಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದರೆ ರುಚಿಕರವಾದ ಎಲೆಕೋಸು ಮಸಾಲೆ ವಡೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com