1 ವರ್ಷದ ಮಗುವಿಗೆ 10 ನಿಮಿಷದಲ್ಲಿ ಮಾಡಬಹುದಾದ ಬೇಬಿ ಫುಡ್

1 ವರ್ಷದ ಮಗುವಿಗೆ ಆಹಾರ ಕೊಡಲು ಹರಸಾಹಸ ಪಡಬೇಕು.ಆರೋಗ್ಯವಾದ, ಸುಲಭವಾಗಿ ಮಾಡಬಹುದು 2 ರೀತಿ ಆಹಾರಗಳು ಇಲ್ಲಿವೆ..

Published: 16th February 2019 12:00 PM  |   Last Updated: 27th April 2019 02:56 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : Online Desk
1. ಕ್ಯಾರೆಟ್ ಪೋಟೋಟೋ ರೈಸ್

ಬೇಕಾಗುವ ಸಾಮಾಗ್ರಿಗಳು
  •  ಅಕ್ಕಿ – 2 ಚಮಚ
  •  ಕ್ಯಾರೆಟ್ – 1
  •  ಆಲೂಗೆಡ್ಡೆ – 1
ಮಾಡುವ ವಿಧಾನ:
* ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.ಸ್ವಲ್ಪ ಹೊತ್ತು ನೆನೆಸಿಡಿ
* ಕ್ಯಾರೆಟ್ ಮತ್ತು ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.
* ನಂತರ ಅಕ್ಕಿ, ಆಲೂಗಡ್ಡೆ ಮತ್ತು ಕ್ಯಾರೆಟ್ ತೊಳೆದು ಕುಕ್ಕರಿಗೆ ಹಾಕಿ ನಾಲ್ಕು ವಿಶಲ್ ಬರುವರೆಗೂ  ಚೆನ್ನಾಗಿ ಬೇಯಿಸಿರಿ.
* ಬೇಯಿಸಿದ ಬಳಿಕ ಅದನ್ನು ಸ್ಮ್ಯಾಶ್ ಮಾಡಿಕೊಳ್ಳಿ.
* ಸ್ವಲ್ಪ ಉಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಆರೋಗ್ಯಯುತವಾದ ಕ್ಯಾರೆಟ್ ಪೋಟೋಟೋ ರೈಸ್ ರೆಡಿ.


2. ಸೇಬು ಮತ್ತು ಬಾಳೆಹಣ್ಣು ಮತ್ತು ಅಕ್ಕಿ ಗಂಜಿ

ಬೇಕಾಗುವ ಸಾಮಾಗ್ರಿಗಳು
  •  ಅಕ್ಕಿ – ಎರಡು ಚಮಚ
  •  ಸೇಬು -1
  •  ಬಾಳೆಹಣ್ಣು – 1
ಮಾಡುವ ವಿಧಾನ
* ಮೊದಲಿಗೆ ಅಕ್ಕಿಯನ್ನು ಎರಡು ಬಾರಿ ತೊಳೆದು ಸ್ವಲ್ಪ ಹೊತ್ತು ನೆನೆಸಿಡಿ
* ನಂತರ ಸೇಬಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ.
* ಅಕ್ಕಿ ಮತ್ತು ಸೇಬನ್ನು ಕುಕ್ಕರಿಗೆ ಹಾಕಿ 2 ವಿಶಲ್ ಬರುವವರೆಗೂ ಬೇಯಿಸಿ.
* ನಂತರ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಬಾಳೆಹಣ್ಣನ್ನು ಪೀಸ್ ಪೀಸ್ ಮಾಡಿ ಹಾಕಿ ರುಬ್ಬಿಕೊಳ್ಳಿ.
* ಬಳಿಕ ಒಂದು ಬೌಲ್ ಗೆ ಹಾಕಿ ಮಕ್ಕಳಿಗೆ ತಿನ್ನಿಸಿ
Stay up to date on all the latest ಆಹಾರ-ವಿಹಾರ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp