ಮಶ್ರೂಮ್ ಮಸಾಲೆ

ರುಚಿಕರವಾದ ಮಶ್ರೂಮ್ ಮಸಾಲೆ ಮಾಡುವ ವಿಧಾನ...

Published: 01st January 2019 12:00 PM  |   Last Updated: 01st January 2019 04:05 AM   |  A+A-


Mushroom Masala

ಮಶ್ರೂಮ್ ಮಸಾಲೆ

Posted By : MVN MVN
Source : Online Desk
ಬೇಕಾಗುವ ಪದಾರ್ಥಗಳು
 • ದನಿಯಾ- 2 ಚಮಚ
 • ಕಾಳು ಮೆಣಸು- 1 ಚಮಚ
 • ಲವಂಗ-3-4
 • ಚಕ್ಕೆ-1-2
 • ಎಲಕ್ಕಿ-1 
 • ಜೀರಿಗೆ- 1 ಚಮಚ
 • ಎಣ್ಣೆ- 3 ಚಮಚ
 • ಮಶ್ರೂಮ್ - 250 ಗ್ರಾಂ
 • ಈರುಳ್ಳಿ- ಹೆಚ್ಚಿಕೊಂಡಿದ್ದು 1 ಬಟ್ಟಲು
 • ಹಸಿಮೆಣಸಿನ ಕಾಯಿ- 2-3
 • ಶುಂಠಿ,ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು 2 ಚಮಚ
 • ಅಚ್ಚ ಖಾರದ ಪುಡಿ- 1 ಚಮಚ
 • ಅರಿಶಿನಪುಡಿ- ಅರ್ಧ ಚಮಚ
 • ಟೊಮೆಟೋ ರಸ- 1 ಬಟ್ಟಲು
 • ಉಪ್ಪು- ರುಚಿಗೆ ತಕ್ಕಷ್ಟು
 • ಬೆಲ್ಲ- ಸ್ವಲ್ಪ
 • ಗೋಡಂಬಿ ಪೇಸ್ಟ್- 2 ಚಮಚ
 • ಕಸೂರಿ ಮೇಥಿ- 1 ಚಮಚ
 • ಫ್ರೆಶ್ ಕ್ರೀಮ್- 1 ಚಮಚ
 • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಮಾಡುವ ವಿಧಾನ...
 • ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಅದಕ್ಕೆ ದನಿಯಾ, ಕಾಳು ಮೆಣಸು, ಲವಂಗ, ಚಕ್ಕೆ, ಎಲಕ್ಕಿ, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. 
 • ನಂತರ ಇದೇ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಮಶ್ರೂಮ್ ಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಇದೇ ಎಣ್ಣೆಯಲ್ಲಿಯೇ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ,ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದು ಮಿಕ್ಸಿ ಜಾರ್'ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. 
 • ನಂತರ ಬಾಣಲೆಗೆ ಎಣ್ಣೆ ಹಾಕಿ ರುಬ್ಬಿಕೊಂಡ ಈರುಳ್ಳಿ ಮಿಶ್ರಣ, ಟೊಮೆಟೋ ರಸವನ್ನು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ನಂತರ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು, ಬೆಲ್ಲ, ಈ ಹಿಂದೆ ಮಾಡಿಕೊಂಡ ಮಸಾಲೆ ಪುಡಿ, ಬಾದಾಮಿ ಪೇಸ್ಟ್, ಫ್ರೆಶ್ ಕ್ರೀಮ್, ಮಶ್ರೂಮ್ ಗಳನ್ನು ಹಾಕಿ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ, ರುಚಿಕರವಾದ ಮಶ್ರೂಮ್ ಮಸಾಲೆ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp