ನವಣೆ ದೋಸೆ

ಆರೋಗ್ಯಕ್ಕೆ ಉತ್ತಮವಾದ ನವಣೆ ದೋಸೆ ಮಾಡುವ ವಿಧಾನ...

Published: 24th January 2019 12:00 PM  |   Last Updated: 31st January 2019 01:16 AM   |  A+A-


Foxtail millet dosa( File image)

ನವಣೆ ದೋಸೆ( ಸಾಂದರ್ಭಿಕ ಚಿತ್ರ)

Posted By : SD SD
Source : Online Desk
ಬೇಕಾಗುವ ಸಾಮಾಗ್ರಿಗಳು
 • ನವಣೆ ಕಾಳು- 2 ಲೋಟ 
 • ಉದ್ದಿನ ಬೇಳೆ- ಅರ್ಧ ಲೋಟ
 • ದಪ್ಪ ಅವಲಕ್ಕಿ- ಅರ್ಧ ಲೋಟ
 • ಮೆಂತ್ಯೆ ಕಾಳು- ಕಾಲು ಚಮಚ
 • ಉಪ್ಪು- ರುಚಿಗೆ ತಕ್ಕಷ್ಟು
 • ಸ್ವಲ್ಪ ಅಡುಗೆ ಎಣ್ಣೆ                                        
ಮಾಡುವ ವಿಧಾನ

 • ನವಣೆ, ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯೆ ಕಾಳುಗಳನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿಡಿ
 • ನಂತರ ಇದನ್ನು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಬೇಕು. ಇದು ಸುಮಾರಾಗಿ ಅಕ್ಕಿ ದೋಸೆಯ ಹಿಟ್ಟಿನ ಹದವಿರಲಿ. ಈ ಹಿಟ್ಟಿಗೆ ಉಪ್ಪು ಹಾಕಿ ಮಿಕ್ಸ್ ಮಾಡಿ.
 • ರುಬ್ಬಿದ ಹಿಟ್ಟನ್ನು 7-8 ಗಂಟೆಗಳ ಕಾಲ ಹಾಗೇ ಇಟ್ಟರೆ ಬೆಳಿಗ್ಗೆಗೆ ಹಿಟ್ಟು ಹುದುಗು ಬಂದಿರುತ್ತದೆ.
 • ಸ್ಟವ್ ಹೊತ್ತಿಸಿ, ಕಾವಲಿಯಿಟ್ಟು ಕಾದಾಗ ಎಣ್ಣೆ ಸವರಿ  ತೆಳ್ಳಗೆ ಹಿಟ್ಟನ್ನು ಸವರಿ ಮುಚ್ಚಳವನ್ನು ಮುಚ್ಚಿ. ಮಧ್ಯಮ ಉರಿ ಇರಲಿ. ನಂತರ ಬೆಂದಾಗ ಈಚೆ ತೆಗೆಯಿರಿ. 
 • ಆರೋಗ್ಯಯುಕ್ತ, ರುಚಿಕರ ನವಣೆ ದೋಸೆಯನ್ನು ಚಟ್ನಿಯೊಂದಿಗೆ ಸವಿಯಬಹುದು

Stay up to date on all the latest ಆಹಾರ-ವಿಹಾರ news with The Kannadaprabha App. Download now
facebook twitter whatsapp