ಉಡುಪಿ ಟೊಮೆಟೋ ಸಾರು

ರುಚಿಕರವಾದ ಉಡುಪಿ ಟೊಮೆಟೋ ಸಾರು ಮಾಡುವ ವಿಧಾನ...

Published: 31st January 2019 12:00 PM  |   Last Updated: 31st January 2019 01:18 AM   |  A+A-


Udupi tomato saaru

ಉಡುಪಿ ಟೊಮೆಟೋ ಸಾರು

Posted By : MVN MVN
Source : Online Desk
ಬೇಕಾಗುವ ಪದಾರ್ಥಗಳು
 • ಕೊಬ್ಬರಿ ಎಣ್ಣೆ- 2 ಚಮಚ
 • ಮೆಂತ್ಯ- ಅರ್ಧ ಚಮಚ
 • ದನಿಯಾ- 20 ಗ್ರಾಂ
 • ಜೀರಿಗೆ- 1 ಚಮಚ
 • ಒಣಗಿದ ಮೆಣಸಿನ ಕಾಯಿ- 25
 • ಕರಿಬೇವು- ಸ್ವಲ್ಪ
 • ಇಂಗು- ಕಾಲು ಚಮಚ
 • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
 • ಹಸಿಮೆಣಸಿನ ಕಾಯಿ- 1-2
 • ಬೆಲ್ಲ- ಸ್ವಲ್ಪ
 • ಅರಿಶಿನದ ಪುಡಿ- ಸ್ವಲ್ಪ
 • ಹುಣಸೆಹಣ್ಣು- ಸ್ವಲ್ಪ
 • ಉಪ್ಪು- ರುಚಿಗೆ ತಕ್ಕಷ್ಟು
 • ತೊಗರಿ ಬೇಳೆ- 1 ಬಟ್ಟಲು
 • ಕಾಯಿ ತುರಿ- ಸ್ವಲ್ಪ
 • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಮಾಡುವ ವಿಧಾನ...
 • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ಕೊಬ್ಬರಿ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಮೆಂತ್ಯೆ, ದನಿಯಾ, ಜೀರಿಗೆ, ಇಂಗು, ಕರಿಬೇವು, ಒಣಗಿದ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ಇದು ಸಂಪೂರ್ಣವಾಗಿ ತಣ್ಣಗಾದ ಬಳಿಕ ಪುಡಿ ಮಾಡಿಟ್ಟುಕೊಳ್ಳಬೇಕು. 
 • ನಂತರ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ 1 ಚಮಚ ಕೊಬ್ಬರಿ ಎಣ್ಣೆ, ಟೊಮೆಟೋ, ಮೆಣಸಿನ ಕಾಯಿ, ಬೆಲ್ಲ, ಅರಿಶಿನದ ಪುಡಿ, ಕರಿಬೇವು, ಹುಣಸೆ ರಸ, ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಂಡು 10 ನಿಮಿಷ ಬಿಡಬೇಕು. 
 • ನಂತರ 2 ಬಟ್ಟಲು ನೀರು, ಬೇಯಿಸಿಕೊಂಡ ತೊಗರಿಬೇಳೆ ಹಾಕಿ 5 ನಿಮಿಷ ಕುದಿಸಬೇಕು. ಇದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆಯೇ ಈ ಹಿಂದೆ ಹುರಿದು ಪುಡಿ ಮಾಡಿಕೊಂಡ ಮಸಾಲೆ ಪುಡಿಯನ್ನು 3 ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕೊಬ್ಬರಿ ತುರಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ 2 ನಿಮಿಷ ಕುದಿಸಿ, ಸಾಸಿವೆ, ಕರಿಬೇವು, ಒಣಗಿದ ಮೆಣಸಿನ ಕಾಯಿ, ಇಂಗು ಹಾಕಿ ಒಗ್ಗರಣೆ ಕೊಟ್ಟು ಇದಕ್ಕೆ ಮಿಶ್ರಣ ಮಾಡಿದರೆ ರುಚಿಕರವಾದ ಉಡುಪಿ ಟೊಮೆಟೋ ಸಾರು ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp