ಸ್ಪೈಸಿ ಖಾರ ಕಡಲೆಪುರಿ ಮಾಡುವ ವಿಧಾನ

ಖಾರ ಕಡಲೆಪುರಿ ಮಾಡುವ ಸುಲಭ ವಿಧಾನ ಇಲ್ಲಿ ವಿವರಿಸಲಾಗಿದೆ.

Published: 27th June 2019 12:00 PM  |   Last Updated: 27th June 2019 01:50 AM   |  A+A-


Khara Kadle Puri

ಖಾರ ಕಡಲೆಪುರಿ

Posted By : SD SD
Source : Online Desk
ಮಳೆಗಾಲ ಆರಂಭವಾಗುತ್ತಿದೆ, ಸಂಜೆಯ ಟೀ ಹೊತ್ತಿಗೆ ಏನಾದರೂ ತಿನ್ನಬೇಕೆಂಬ ನಾಲಗೆ ಚಪಲ ತಣಿಸಲು ಖಾರ ಮಂಡಕ್ಕಿ ಅಥವಾ ಖಾರ ಕಡಲೆಪುರಿ ಉತ್ತಮ ಕಾಂಬಿನೇಷನ್ ಆಗಿರುತ್ತದೆ.

ಬೇಕಾಗಿರುವ ಸಾಮಾಗ್ರಿಗಳು
1 .ಕಡಲೆಪುರಿ – 3 ಕಪ್
2. ಹುರಿಗಡಲೆ-1 ಕಪ್
3. ಕಡಲೆಕಾಯಿ ಬೀಜ 1 ಕಪ್
4. ಒಣ ಮೆಣಸಿನಕಾಯಿ-4
5. ಎಣ್ಣೆ- 2 ಚಮಚ
6. ಸಾಸಿವೆ
7. ಕರಿಬೇವು- ಸ್ವಲ್ಪ
8. ಅರಿಶಿಣ ಪುಡಿ – 1/4 ಚಮಚ, 
9. ಸೇವ್/ಖಾರ ಬೂಂದಿ
10. ಸಿಪ್ಪೆ ತೆಗೆದ ಬೆಳ್ಳುಳ್ಳಿ- 1ಕಪ್
11. ಕೆಂಪು ಮೆಣಸಿನಕಾಯಿ ಪುಡಿ ಅರ್ಧ ಚಮಚ
12 ಉಪ್ಪು- ರುಚಿಗೆ ತಕ್ಕಷ್ಟು


ಮಾಡುವ ವಿಧಾನ
* ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
* ನಂತರ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿಯನ್ನು ಜಜ್ಜಿ ಒಗ್ಗರಣೆಗೆ ಹಾಕಿ ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
* ನಂತರ ಅರಿಶಿಣ ಮತ್ತು ಕಡಸೆ ಕಾಯಿ ಬೀಜ ಹಾಗೂ ಹುರಿಗಡಲೆ ಹಾಕಿ ಫ್ರೈ ಮಾಡಿ
* ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಮಿಕ್ಸ್ ಮಾಡಿ.
ಕೊನೆಯಲ್ಲಿ ಕಡಲೆಪುರಿ ಹಾಕಿ ಚೆನ್ನಾಗಿ ಕಲೆಸಿದರೇ ಸ್ಪೈಸೀ ಒಗ್ಗರಣೆ ಕಡಲೆಪುರಿ ಸವಿಯಲು ಸಿದ್ಧ
Stay up to date on all the latest ಆಹಾರ-ವಿಹಾರ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp