ಬಾಳೆಕಾಯಿ ಚಿಪ್ಸ್

 ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ...

Published: 01st October 2019 02:23 PM  |   Last Updated: 01st October 2019 02:23 PM   |  A+A-


Banana chips

ಬಾಳೆಕಾಯಿ ಚಿಪ್ಸ್

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

  • ಬಾಳೆಕಾಯಿ-2
  • ಉಪ್ಪು- ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ -ಸ್ವಲ್ಪ
  • ಕೊಬ್ಬರಿ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಬಾಳೆಕಾಯಿ ಸಿಪ್ಪೆ ತೆಗೆದು, ಸಣ್ಣದಾಗಿ ಚಿಪ್ಸ್ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. 
  • ನಂತರ ಕತ್ತರಿಸಿಕೊಂಡ ಬಾಳೆಕಾಯಿಗೆ, ಉಪ್ಪು, ಅರಿಶಿಣದ ಪುಡಿ ಹಾಗೂ 5 ನಿಮಿಷ ನೆನೆಯಲು ಬಿಡಬೇಕು. 
  • ಬಳಿಕ ನೀರನ್ನು ಬಸಿಯಬೇಕು. ಒಳೆಯ ಮೇಲೆ ಬಾಣಲೆ ಇಟ್ಟು ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು. 
  • ಕಾದ ಎಣ್ಣೆಯಲ್ಲಿ ಬಾಳೆಕಾಯಿಗಳನ್ನು ಹಾಕಿ 10 ನಿಮಿಷಗಳ ಕಾಲ ಕರಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp