
ಆ್ಯಪಲ್ ಕೀರು
Source : Online Desk
ಬೇಕಾಗುವ ಪದಾರ್ಥಗಳು
- ಆ್ಯಪಲ್ -2
- ತುಪ್ಪ- ಸ್ವಲ್ಪ
- ಹಾಲು- 3 ಬಟ್ಟಲು
- ಕೇಸರಿ- ಸ್ವಲ್ಪ
- ಮಿಲ್ಕ್ ಮೇಡ್ - ಮುಕ್ಕಾಲು ಬಟ್ಟಲು
- ಏಲಕ್ಕಿ- ಸ್ವಲ್ಪ
- ಬಾದಾಮಿ ಚೂರುಗಳು- ಸ್ವಲ್ಪ
ಮಾಡುವ ವಿಧಾನ...
- ಮೊದಲು ಆ್ಯಪಲ್'ನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ 2-3 ಚಮಚ ತುಪ್ಪ ಹಾಕಿ ತುರಿದ ಆ್ಯಪಲ್'ನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.
- ಪಾತ್ರೆಯೊಂದಕ್ಕೆ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಬೇಕು. ಹಾಲು ಕೆಂಪಗೆ ಕಾದ ಬಳಿಕ ಕೇಸರಿ ಹಾಗೂ ಮಿಲ್ಕ್ ಮೇಡ್ ಹಾಕಬೇಕು. ಮಿಲ್ಕ್ ಮೇಡ್ ಇಲ್ಲದಿದ್ದರೆ, ಅಳತೆಗೆ ತಕ್ಕಷ್ಟು ಸಕ್ಕರೆ ಹಾಕಬಹುದು.
- ಬಳಿಕ ಏಲಕ್ಕಿ ಪುಡಿ ಹಾಕಿ ಸ್ವಲ್ಪ ಹೊತ್ತು ಕಾಯಿಸಿ, ಆ್ಯಪಲ್ ಹಾಗೂ ಬಾದಾಮಿ ಚೂರುಗಳನ್ನು ಸೇರಿಸಿ, ಕೆಲ ಗಂಟೆಗಳ ಕಾಲ ಫ್ರಿಡ್ಜ್'ನಲ್ಲಿಟ್ಟು ತೆಗೆದರೆ ರುಚಿಕರವಾದ ಆ್ಯಪಲ್ ಕೀರು ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news