ಫ್ರೈಡ್ ಮೋದಕ

ರುಚಿಕರವಾದ ಫ್ರೈಡ್ ಮೋದಕ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಫ್ರೈಡ್ ಮೋದಕ

  • ಬೇಕಾಗುವ ಪದಾರ್ಥಗಳು
  • ಮೈದಾ ಹಿಟ್ಟು- 1.5 ಬಟ್ಟಲು
  • ಅಕ್ಕಿ ಹಿಟ್ಟು- 2 ಚಮಚ
  • ಉಪ್ಪು-ಸ್ವಲ್ಪ
  • ತುಪ್ಪ-2 ಚಮಚ
  • ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ
  • ಕೊಬ್ಬರಿ ಪುಡಿ- 1 ಬಟ್ಟಲು
  • ಬೆಲ್ಲ- ಅರ್ಧ ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಬಾದಾಮಿ- ಸಣ್ಣಗೆ ಹೆಚ್ಚಿದ್ದು 1 ಚಮಚ
  • ಗೋಡಂಬಿ- ಸಣ್ಣಗೆ ಹೆಚ್ಚಿದ್ದು 1 ಚಮಚ
  • ಒಣದ್ರಾಕ್ಷಿ- 2 ಚಮಚ

ಮಾಡುವ ವಿಧಾನ...

  • ಮೊದಲು ಪಾತ್ರೆಯೊಂದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ತುಪ್ಪ ಹಾಗೂ ನೀರು ಹಾಕಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು.
  • ನಂತರ ಬಾಣಲೆಗೆ ಸ್ವಲ್ಪ ಕೊಬ್ಬರಿ ಪುಡಿ, ಬೆಲ್ಲ, ಏಲಕ್ಕಿ ಪುಡಿ ಹಾಗೂ ಬಾದಾಮಿ, ಗೋಡಂಬಿ, ದ್ರಾಕ್ಷಿ, ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. 
  • ಈಗಾಗಲೇ ತಯಾರಿಸಿಕೊಂಡ ಹಿಟ್ಟನ್ನು ಸಣ್ಣಗೆ ಪೂರಿ ಆಕಾರಕ್ಕೆ ಒತ್ತಿಕೊಂಡು ಮಧ್ಯೆ ಕೊಬ್ಬರಿ ಹಾಗೂ ಬೆಲ್ಲದ ಮಿಶ್ರಣವನ್ನು ಇಟ್ಟು ಮೋದಕದ ಆಕಾರ ತಯಾರಿಸಿಕೊಳ್ಳಬೇಕು. ತಯಾರಿಸಿಕೊಂಡ ಈ ಮೋದಕಗಳನ್ನು ಎಣ್ಣೆಯಲ್ಲಿ ಹಾಕಿ ಕೆಂಪಗೆ ಖರಿದರೆ ರುಚಿಕರವಾದ ಫ್ರೈಡ್ ಮೋದಕ ಸವಿಯಲು ಸಿದ್ಧ. 
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com