ಗೋಧಿ ಚಕ್ಕುಲಿ ಮಾಡುವ ವಿಧಾನ  

ರುಚಿಕರವಾದ ಗೋಧಿ ಚಕ್ಕುಲಿ ಮಾಡುವ ವಿಧಾನ

Published: 03rd September 2019 09:10 AM  |   Last Updated: 03rd September 2019 09:18 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಗೋಧಿ ಹಿಟ್ಟು - 2 ಬಟ್ಟಲು
 • ಅಕ್ಕಿ ಹಿಟ್ಟು - 1/4 ಬಟ್ಟಲು
 • ಜೀರಿಗೆ - 1 ಚಮಚ
 • ಅರಿಶಿಣದ ಪುಡಿ- ಅರ್ಧ ಚಮಚ
 • ಖಾರದ ಪುಡಿ- 1 ಚಮಚ
 • ಇಂಗು- ಸ್ವಲ್ಪ
 • ಉಪ್ಪು- ರುಚಿಗೆ ತಕ್ಕಷ್ಟು
 • ಎಣ್ಣೆ- ಖರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

 • ಮೊದಲು ಗೋಧಿ ಹಾಗೂ ಅಕ್ಕಿ ಹಿಟ್ಟನ್ನು ಒಂದು ಕಾಟನ್ ಬಟ್ಟೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿಡಬೇಕು.
 • ಕುಕ್ಕರ್'ಗೆ 1 ಬಟ್ಟಲು ನೀರು ಹಾಕಿ ಪಾತ್ರೆಯೊಂದರಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಗೋಧಿ ಹಾಗೂ ಅಕ್ಕಿ ಹಿಟ್ಟನ್ನು ಬಟ್ಟೆ ಸಮೇತದಿಂದಲೇ ಪಾತ್ರೆಯಲ್ಲಿಟ್ಟು ಕ್ಕುಕ್ಕಲ್ ನಲ್ಲಿಟ್ಟು ಹಬೆಯಲ್ಲಿ 15 ನಿಮಿಷ ಇಡಬೇಕು. ಕುಕ್ಕರ್ ವಿಶಲ್ ಹಾಕಬಾರದು.
 • 15 ನಿಮಿಷದ ಬಳಿಕ ಕುಕ್ಕರ್ ನಿಂದ ತೆಗೆದು ಹಿಟ್ಟನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಗೆ ಜೀರಿಗೆ, ಉಪ್ಪು, ಅರಿಶಿಣ, ಖಾರದ ಪುಡಿ, ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. 
 • ಬಳಿಕ ಹೊರಳಿಗೆ ಹಾಕಿ ಚಕ್ಕುಲಿ ಆಕಾರ ಮಾಡಿಕೊಂಡು ಎಣ್ಣೆಗೆ ಹಾಕಿ ಕರಿದರೆ ರುಚಿಕರವಾದ ಗೋಧಿ ಹಿಟ್ಟಿನ ಚಕ್ಕುಲಿ ಸವಿಯಲು ಸಿದ್ಧ. 
   
Stay up to date on all the latest ಆಹಾರ-ವಿಹಾರ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp