ಮಟನ್ ಪಲಾವ್

ರುಚಿಕರವಾದ ಮಟನ್ ಪಲಾವ್ ಮಾಡುವ ವಿಧಾನ...
ಮಟನ್ ಪಲಾವ್
ಮಟನ್ ಪಲಾವ್

ಬೇಕಾಗುವ ಪದಾರ್ಥಗಳು...

  • ಮಟನ್- ಅರ್ಧ ಕೆಜಿ
  • ಈರುಳ್ಳಿ- 3-4
  • ಬೆಳ್ಳುಳ್ಳಿ- ಸ್ವಲ್ಪ
  • ಏಲಕ್ಕಿ- 2
  • ಚಕ್ಕೆ- ಸ್ವಲ್ಪ
  • ಲವಂಗ-ಸ್ವಲ್ಪ
  • ಪಲಾವ್ ಎಲೆ- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಜೀರಿಗೆ ಪುಡಿ- ಅರ್ಧ ಚಮಚ
  • ಅಚ್ಛ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ - 1 ಚಮಚ
  • ಮೆಣಸಿನ ಕಾಯಿ-2-3
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1/4 ಬಟ್ಟಲು
  • ಮೊಸರು- ಅರ್ಧ ಬಟ್ಟಲು
  • ಪುದೀನಾ- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ನೀರು- 2 ಬಟ್ಟಲು
  • ಗರಂ ಮಸಾಲಾ ಪುಡಿ - ಕಾಲು ಚಮಚ
  • ಬಾಸುಮತಿ ಅಕ್ಕಿ-1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕನುಗುಣವಾಗಿ

ಮಾಡುವ ವಿಧಾನ...

  • ಮೊದಲು ಕುಕ್ಕರ್ ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಮಟನ್ ಪೀಸ್, ಉಪ್ಪು, ನೀರು ಹಾಕಿ ಚೆನ್ನಾಗಿ 3-4 ವಿಷಲ್ ಕೂಗಿಸಿಕೊಳ್ಳಬೇಕು. ಬಳಿಕ ಕುಕ್ಕರ್ ಮುಚ್ಚಳವನ್ನು ತೆಗೆದು ನೀರನ್ನು ಬಸಿದಿಟ್ಟುಕೊಳ್ಳಬೇಕು. 
  • ಮತ್ತೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಏಲಕ್ಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅಚ್ಛ ಖಾರದ ಪುಡಿ, ದನಿಯಾ ಪುಡಿತ, ಮೆಣಸಿನ ಕಾಯಿ, ಟೊಮೆಟೋ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮೊಸರು, ಪುದೀನಾ, ಕೊತ್ತಂಬರಿ ಸೊಪ್ಪು ಹಾಗೂ ಈಗಾಗಲೇ ಬಸಿದಿಟ್ಟುಕೊಂಡಿದ್ದ ಮಟನ್ ನೀರು ಸೇರಿ ಒಟ್ಟು 2 ಬಟ್ಟಲು ನೀರನ್ನು ಹಾಕಬೇಕು. ನಂತರ ತೊಳೆದ ಅಕ್ಕಿ, ಗರಂ ಮಸಾಲಾ ಪುಡಿ, ಉಪ್ಪು ಹಾಗಿ 2-3 ಕೂಗು ಕೂಗಿಸಿದರೆ, ರುಚಿಕರವಾದ ಮಟನ್ ಪಲಾವ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com