ವೆಜ್ ಕಬಾಬ್ 

ರುಚಿಕರವಾದ ವೆಜ್ ಕಬಾಬ್ ಮಾಡುವ ವಿಧಾನ...
ವೆಜ್ ಕಬಾಬ್
ವೆಜ್ ಕಬಾಬ್

ಬೇಕಾಗುವ ಪದಾರ್ಥಗಳು...

  • ಆಲೂಗಡ್ಡೆ- ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು ಸ್ವಲ್ಪ
  • ಕ್ಯಾರೆಟ್- ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು ಸ್ವಲ್ಪ
  • ಬೀನ್ಸ್- ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು ಸ್ವಲ್ಪ
  • ಸ್ವೀಟ್ ಕಾರ್ನ್- ಸ್ವಲ್ಪ
  • ಬಟಾಟಿ- ಸ್ವಲ್ಪ
  • ಹೂಕೋಸು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾರ್ನ್ ಫ್ಲೋರ್- 1/4 ಬಟ್ಟಲು
  • ಅಚ್ಚ ಖಾರದ ಪುಡಿ- 3/4 ಚಮಚ
  • ಗರಂ ಮಸಾಲೆ ಪುಡಿ- ಅರ್ಧ ಚಮಚ
  • ಜೀರಿಗೆ ಪುಡಿ- 1/4 ಚಮಚ
  • ಆಮ್ಚೂರ್- ಅರ್ಧ ಚಮಚ
  • ಶುಂಠಿ, ಬೆಳ್ಳುಳ್ಳು ಪೇಸ್ಟ್- ಅರ್ಧ ಚಮಚ
  • ಪುದೀನ- 2 ಚಮಚ
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು 2 ಚಮಚ
  • ಕಸೂರಿ ಮೇಥಿ- ಅರ್ಧ ಚಮಚ
  • ಬ್ರೆಡ್ ಕ್ರಮ್ಬ್ಸ್- 2-3 ಚಮಚ

ಮಾಡುವ ವಿಧಾನ... 

  • ಮೊದಲಿಗೆ ಕುಕ್ಕರ್'ನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕು ಕಾಯಲು ಬಿಡಬೇಕು. ಕುಕ್ಕರ್ ಒಳಗೆ ಇಡುವಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಟಿ. ಹೂಕೋಸು ಹಾಗೂ ಉಪ್ಪು ಹಾಕಿ ಕುಕ್ಕರ್ ಒಳಗಿಟ್ಟು ಹಬೆಯಲ್ಲಿ ಬೇಯಿಸಬೇಕು. ನಾಲ್ಕು ವಿಷಲ್ ಕೂಗಿಸಬೇಕು. 
  • ನಂತರ ಬೆಂದ ತರಕಾರಿಗಳು ತಣ್ಣಗಾಗಲು 15 ನಿಮಿಷ ಬಿಟ್ಟು, ನಂತರ ಅದಕ್ಕೆ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ. ಗರಂ ಮಸಾಲೆ ಪುಡಿ, ಜೀರಿಗೆ ಪುಡಿ, ಆಮ್ಚೂರ್, ಶುಂಠಿ, ಬೆಳ್ಳುಳ್ಳು ಪೇಸ್ಟ್, ಪುದೀನ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ, ಬ್ರೆಡ್ ಕ್ರಮ್ಬ್ಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 15 ನಿಮಿಷ ನೆನೆಯಲು ಬಿಡಬೇಕು. 
  • ನಂತರ ನೆನೆದ ಈ ಮಸಾಲೆಯನ್ನು ಉಂಡೆಗಳನ್ನಾಗಿ ಮಾಡಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ವೆಜ್ ಕಬಾಬ್ ಸವಿಯಲು ಸಿದ್ಧ. 
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com