ಸ್ವೀಟ್ ಬೋಂಡಾ

ರುಚಿಕರವಾದ ಸ್ವೀಟ್ ಬೋಂಡಾ ಮಾಡುವ ವಿಧಾನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಕಾಗುವ ಪದಾರ್ಥಗಳು

  • ಅಕ್ಕಿ- ಅರ್ಧ ಬಟ್ಟಲು
  • ಉದ್ದಿನ ಬೇಳೆ - 1/4 ಬಟ್ಟಲು
  • ಬೆಲ್ಲ- 1 ಬಟ್ಟಲು
  • ಕಡಲೆಬೇಳೆ -1 ಬಟ್ಟಲು 2 ಗಂಟೆ
  • ಕೊಬ್ಬರಿ ತುರಿ
  • ಏಲಕ್ಕಿ ಪುಡಿ
  • ತುಪ್ಪ- ಸ್ವಲ್ಪ
  • ಎಣ್ಣೆ - ಕರಿಯಲು

ಮಾಡುವ ವಿಧಾನ...

  • ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. 
  • ನಂತರ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಯಲು ಬಿಡಬೇಕು. 
  • ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಕಡಲೆಬೇಳೆಗೆ ಬೆಲ್ಲವನ್ನ, ಏಲಕ್ಕಿ ಹಾಗೂ ತುಪ್ಪವನ್ನು ಹಾಕಿ ಊರ್ಣವನ್ನು ಸಿದ್ಧಪಡಿಸಿಕೊಳ್ಳಬೇಕು. 
  • ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಊರ್ಣವನ್ನು ಉಂಡೆಗಳನ್ನು ಮಾಡಿಟ್ಟುಕೊಂಡು ಈ ಹಿಂದೆಯೇ ರುಬ್ಬಿಕೊಂಡಿದ್ದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಸ್ವೀಟ್ ಬೋಂಡಾ ಸವಿಯಲು ಸಿದ್ಧ. 
     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com