ಟೊಮೆಟೋ ದೋಸೆ

 ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಟೊಮೆಟೋ ದೋಸೆ ಮಾಡುವ ವಿಧಾನ...
ಟೊಮೆಟೋ ದೋಸೆ
ಟೊಮೆಟೋ ದೋಸೆ

ಬೇಕಾಗುವ ಪದಾರ್ಥಗಳು

  • ಟೊಮೆಟೋ- 3
  • ಒಣಗಿದ ಮೆಣಸಿನ ಕಾಯಿ- 3-4
  • ಶುಂಠಿ- ಸ್ವಲ್ಪ
  • ರವೆ- ಅರ್ಧ ಬಟ್ಟಲು
  • ಅಕ್ಕಿ ಹಿಟ್ಟು- 1 ಬಟ್ಟಲು
  • ಗೋಧಿ ಹಿಟ್ಟು- ಮುಕ್ಕಾಲು ಬಟ್ಟಲು
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಜೀರಿಗೆ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾಳು ಮೆಣಸಿನ ಪುಡಿ- ಸ್ವಲ್ಪ

ಮಾಡುವ ವಿಧಾನ...

  • ಮೊದಲು ಮಿಕ್ಸಿ ಜಾರ್'ಗೆ ಟೊಮೆಟೋ, ಮೆಣಸಿನ ಕಾಯಿ ಹಾಗೂ ಶುಂಠಿ ಹಾಕಿ ರುಬ್ಬಿಕೊಳ್ಳಬೇಕು. 
  • ನಂತರ ಇದನ್ನು ಪಾತ್ರೆಯೊಂದಕ್ಕೆ ಹಾಕಿಕೊಂಡು, ಅಕ್ಕಿ ಹಿಟ್ಟು, ರವೆ, ಗೋಧಿ ಹಿಟ್ಟು ಹಾಕಿ ಉಂಡೆ ಇಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಬಳಿಕ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕಾಳು ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 20 ನಿಮಿಷ ನೆನೆಯಲು ಬಿಡಬೇಕು. 
  • ನಂತರ ಒಲೆಯ ಮೇಲೆ ತವಾ ಇಟ್ಟು ಹಿಟ್ಟು ಹಾಕಿ ಎರಡೂ ಬದಿಯಲ್ಲೂ ಸುಟ್ಟರೆ, ರುಚಿಕರವಾದ ಟೊಮೆಟೋ ದೋಸೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com