ಕುಷ್ಕಾ ರೈಸ್

ರುಚಿಕರವಾದ ಕುಷ್ಕಾ ರೈಸ್ ಮಾಡುವ ವಿಧಾನ...

Published: 26th December 2020 02:06 PM  |   Last Updated: 26th December 2020 02:06 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಅಕ್ಕಿ- 1 ಬಟ್ಟಲು
 • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
 • ಅಚ್ಛ ಖಾರದ ಪುಡಿ- 1 ಚಮಚ
 • ಉಪ್ಪು- ರುಚಿಗೆ ತಕ್ಕಷ್ಟು
 • ಎಣ್ಣೆ-ಸ್ವಲ್ಪ
 • ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು- ಸ್ವಲ್ಪ
 • ಈರುಳ್ಳಿ - 1 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
 • ಗರಂ ಮಸಾಲೆ ಪುಡಿ - ಅರ್ಧ ಚಮಚ
 • ಹಸಿಮೆಣಸಿನಕಾಯಿ-2
 • ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು)
 • ಮೊಸರು-ಅರ್ಧ ಬಟ್ಟಲು
 • ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ
 • ಅರಿಶಿಣದ ಪುಡಿ- ಸ್ವಲ್ಪ

ಮಾಡುವ ವಿಧಾನ...

 • ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಕಾದ ಬಳಿಕ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
 • ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ ಎಲ್ಲವನ್ನು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅರಿಶಿಣದ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಎಲ್ಲವನ್ನೂ ಹಾಕಿ 5 ನಿಮಿಷ ಕುದಿಯಲು ಬಿಟ್ಟು, ನೆನೆಸಿಟ್ಟುಕೊಂಡ ಅಕ್ಕಿಯನ್ನೂ ಹಾಕಿ 5 ನಿಮಿಷ ಬಿಡಬೇಕು. 
 • ಬಳಿಕೆ ಅಳತೆಯಷ್ಟು 2 ಬಟ್ಟಲು ನೀರು ಹಾಕಿ ಕುಕ್ಕುರ್ ಮುಚ್ಚಳವನ್ನು ಮುಚ್ಚಿ 1-2 ಕೂಗು ಕೂಗಿಸಿಕೊಂಡರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp