ಆರೆಂಜ್ ಫಿರ್ನಿ
ಆರೆಂಜ್ ಫಿರ್ನಿ

ಆರೆಂಜ್ ಫಿರ್ನಿ

ರುಚಿಕರವಾದ ಆರೆಂಜ್ ಫಿರ್ನಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಬಾಸುಮತಿ ಅಕ್ಕಿ- 1/2 ಬಟ್ಟಲು
  • ಆರೆಂಜ್ -2 
  • ಕಾಯಿಸಿದ ಹಾಲು- 1 ಲೀಟರ್
  • ಸಕ್ಕರೆ- 3/4 ಬಟ್ಟಲು
  • ಏಲಕ್ಕಿ ಪುಡಿ- 1 ಚಮಚ
  • ಕೇಸರಿ ದಳ- 4-5
  • ಆರೆಂಜ್ ಸಿಪ್ಪೆ- ಸ್ವಲ್ಪ
  • ಪಿಸ್ತಾ- ಸ್ವಲ್ಪ
  • ಬಾದಾಮಿ- 4

ಮಾಡುವ ವಿಧಾನ...

  • ಅಕ್ಕಿಯನ್ನು ಚೆನ್ನಾಗಿ ತೊಳೆದು 1 ಗಂಟೆಗಳ ಕಾಲ ನೆನೆಸಬೇಕು. ನಂತರ ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕದಂತೆ ಅಕ್ಕಿಯನ್ನು ರುಬ್ಬಿಕೊಳ್ಳಬೇಕು. ಅಕ್ಕಿಯನ್ನು ಪುಡಿ ಮಾಡಿಕೊಳ್ಳಬೇಕು.
  • ಆರೆಂಜ್ ಗಳನ್ನು ಕತ್ತರಿಸಿಕೊಂಡು ರಸ ತೆಗೆಯಬೇಕು. 
  • ಒಲೆಯ ಮೇಲೆ ಬಾಣಲೆಇಟ್ಟು, ಹಾಲನ್ನು ಕಾಯಲು ಬಿಡಬೇಕು. ಹಾಲು ಕಾದ ನಂತರ ಪುಡಿ ಮಾಡಿಕೊಂಡ ಅಕ್ಕಿಯನ್ನು ಹಾಕಿ ಗಂಟಾಗದಂತೆ ಕೈಯಾಡಿಸಬೇಕು. 
  • ಅಕ್ಕಿ ಬಂದ ಬಳಿಕ ಸಕ್ಕರೆ, ಏಲಕ್ಕಿ ಪುಡಿ, ಕೇಸರಿ ದಳ, ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಫಿರ್ನಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. 
  • ನಂತರ ಆರೆಂಜ್ ತೆಗೆದುಕೊಂಡು ಸಿಪ್ಪೆಯನ್ನು ತುರಿದು ಸ್ವಲ್ಪ ಹಾಕಬೇಕು. ನಂತರ ಆರೆಂಜ್ ರಸ, ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾ, ಬಾದಾಮಿಯನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾಗ ಆರೆಂಜ್ ಫಿರ್ನಿ ಸವಿಯಲು ಸಿದ್ಧ. 

Related Stories

No stories found.

Advertisement

X
Kannada Prabha
www.kannadaprabha.com