ಎಗ್ ಮಂಚೂರಿ

ರುಚಿಕರವಾದ ಎಗ್ ಮಂಚೂರಿ ಮಾಡುವ ವಿಧಾನ...
ಎಗ್ ಮಂಚೂರಿ
ಎಗ್ ಮಂಚೂರಿ

ಮಾಡುವ ವಿಧಾನ...

  • ಮೊಟ್ಟೆ- 4
  • ಹಾಲು- 1/2 ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಕಾಳು ಮೆಣಸಿನ ಪುಡಿ- ಚಿಟಿಕೆಯಷ್ಟು
  • ಹಸಿರು ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಕಡಲೆಹಿಟ್ಟು- ಸ್ವಲ್ಪ
  • ಜೋಳದ ಹಿಟ್ಟು- ಸ್ವಲ್ಪ
  • ಮೈದಾ ಹಿಟ್ಟು- ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
  • ಎಣ್ಣೆ -ಕರಿಯಲು ಅಗತ್ಯವಿದ್ದ
  • ಈರುಳ್ಳಿ- ಸ್ವಲ್ಪ
  • ಕ್ಯಾಪ್ಸಿಕಂ- ಎಲ್ಲಾ ಬಣ್ಣದ್ದು ಸ್ವಲ್ಪ
  • ಸೋಯಾ ಸಾಸ್- 1 ಚಮಚ
  • ಚಿಲ್ಲಿ ಸಾಸ್- 1 ಚಮಚ
  • ಟೊಮೆಟೋ ಸಾಸ್- 1.5 ಚಮಚ
  • ವಿನೇಗರ್- ಅರ್ಧ ಚಮಚ
  • ನೀರು- ಅರ್ಧ ಬಟ್ಟಲು

ಮಾಡುವ ವಿಧಾನ...

  • ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಹಸಿರು ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ನೀರು ಕುದಿಯುವ ವೇಳೆ ಮೊಟ್ಟೆಯ ಮಿಶ್ರಣ ಇದ್ದ ಪಾತ್ರೆಯನ್ನು ಅದರಲ್ಲಿಟ್ಟು ಆವಿಯಲ್ಲಿ ಮೊಟ್ಟೆಯನ್ನು ಬೇಯಿಸಬೇಕು. ಬೆಂದ ಈ ಮೊಟ್ಟೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. 
  • ನಂತರ ಮತ್ತೊಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಸ್ವಲ್ಪ ಅಚ್ಛ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ತುಂಡರಿಸಿದ ಮೊಟ್ಟೆಗಳನ್ನು ಇದರಲ್ಲಿ ಅದ್ದಿ, ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು. 
  • ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಈರುಳ್ಳಿ, ಉಪ್ಪು ಹಾಗೂ ಎಲ್ಲಾ ಸಾಸ್, ವಿನೇಗರ್ ಹಾಕಿ ಮಿಶ್ರಣ ಮಾಡಬೇಕು. ನಂತರ ನೀರು ಹಾಕಿ ಕುದಿಯಲು ಬಿಟ್ಟು ಗ್ರೇವಿ ಗಟ್ಟಿಯಾದ ಬಳಿಕ ಈಗಾಗಲೇ ಎಣ್ಣೆಯಲ್ಲಿ ಕರಿದ ಮೊಟ್ಟೆಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಮಂಚೂರಿ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com