ಪನ್ನೀರ್ ಬಿರಿಯಾನಿ

ರುಚಿಕರವಾದ ಪನ್ನೀರ್ ಬಿರಿಯಾನಿ ಮಾಡುವ ವಿಧಾನ...

Published: 07th January 2020 02:04 PM  |   Last Updated: 07th January 2020 02:04 PM   |  A+A-


Paneer Biryani

ಪನ್ನೀರ್ ಬಿರಿಯಾನಿ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಮೊಸರು- 1 ಬಟ್ಟಲುಟ
 • ಅರಿಶಿನ- 1/4 ಚಮಚ
 • ಕಾಶ್ಮೀರಿ ಚಿಲ್ಲಿ ಪೌಡರ್- 2 ಚಮಚ
 • ದನಿಯಾ ಪುಡಿ - 1 ಚಮಚ
 • ಮಾವಿನ ಪುಡಿ - 1 ಚಮಚ
 • ಉಪ್ಪು- ರುಚಿಗೆ ತಕ್ಕಷ್ಟು
 • ಕಸೂರಿ ಮೇಥಿ- ಸ್ವಲ್ಪ
 • ಪನ್ನೀರ್- 400 ಗ್ರಾಂ
 • ಕೇಸರಿ- ಬಿಸಿ ಹಾಲಿನಲ್ಲಿ ನೆನೆಸಿದ್ದು ಸ್ವಲ್ಪ
 • ಬಾಸುಮತಿ ಅಕ್ಕಿ- 1 ಬಟ್ಟಲು
 • ಚಕ್ಕೆ, ಲವಂಗ, ಪಲಾವ್ ಎಲೆ ಮಸಾಲ ಪದಾರ್ಥಗಳು- ಸ್ವಲ್ಪ
 • ತುಪ್ಪ- ಸ್ವಲ್ಪ
 • ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
 • ಟೊಮೆಟೋ- 2-3
 • ಹಸಿಮೆಣಸಿನ ಕಾಯಿ- 2
 • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
 • ಪುದಿನಾ- ಸ್ವಲ್ಪ
 • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

 • ಮೊದಲು ಅಕ್ಕಿಯನ್ನು 20 ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಬೇಕು.
 • ಬಳಿಕ ಪಾತ್ರೆಯೊಂದಕ್ಕೆ ಮೊಸರು, ಅರಿಶಿನ, ಖಾರದ ಪುಡಿ, ದನಿಯಾ ಪುಡಿ, ಮಾವಿನ ಪುಡಿ, ಉಪ್ಪು, ಕಸೂರಿ ಮೇಥಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಪನ್ನೀರ್ ನ್ನು ಕತ್ತರಿಸಿ ಮಸಾಲೆಯೊಂದಿಗೆ ಮಿಶ್ರಣ ಮಾಡಿ ನೆನೆಯಲು ಬಿಡಬೇಕು 
 • ಪಾತ್ರೆಯೊಂದಕ್ಕೆ 2 ಬಟ್ಟಲು ನೀರು ಹಾಕಿ ಅಕ್ಕಿ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಉಪ್ಪು ಹಾಕಿ ಅನ್ನ ಮಾಡಿಕೊಳ್ಳಬೇಕು. 
 • ನಂತರ ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು, ತುಪ್ಪ ಹಾಕಿ ಕಾಯಲು ಬಿಡಬೇಕು. ನಂತರ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ, ಶುಂಠಿ, ಬೆಳ್ಳುಳ್ಳಿ ಪೇಸ್ಟ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಅರಿಶಿನ, ಉಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಕಿ ಮಿಶ್ರಣ ಮಾಡಬೇಕು. 
 • ನಂತರ ಪುದೀನಾ, ಕೊತ್ತಂಬರಿ ಸೊಪ್ಪನ್ನು ಹಾಕಿ ನಂತರ ಈಗಾಗಲೇ ಮಸಾಲೆಯಲ್ಲಿ ನೆನೆಸಿದ ಪನ್ನೀರ್ ಗಳನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಾಡಿಟ್ಟುಕೊಂಡ ಅನ್ನ ಹಾಗೂ ಕೇಸರಿ ಹಾಲನ್ನು ಹಾಕಿ 5-10 ನಿಮಿಷ ಸಣ್ಣ ಒಲೆಯ ಮೇಲಿಟ್ಟು ಬೇಯಲು ಬಿಡಬೇಕು. ನಂತರ ಮಸಾಲೆಯೊಂದಿಗೆ ಅನ್ನವನ್ನು ಮಿಶ್ರಣ ಮಾಡಿದರೆ ರುಚಿಕರವಾದ ಪನ್ನೀರ್ ಬಿರಿಯಾನಿ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp