ಜೀರಾ ರೈಸ್

ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಜೀರಾ ರೈಸ್ ಮಾಡುವ ವಿಧಾನ...
ಜೀರಾ ರೈಸ್
ಜೀರಾ ರೈಸ್

ಬೇಕಾಗುವ ಪದಾರ್ಥಗಳು...

  • ಬಾಸುಮತಿ ಅಕ್ಕಿ- 1 ಬಟ್ಟಲು
  • ಜೀರಿಗೆ- 1 ಚಮಚ
  • ನೀರು-  2 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ತುಪ್ಪ- 2 ಚಮಚ
  • ಹಸಿಮೆಣಸಿನ ಕಾಯಿ- 2-3
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಒಲೆಯ ಮೇಲೆ ಪಾತ್ರವನ್ನು ಇಟ್ಟು ಅದಕ್ಕೆ 2 ಬಟ್ಟಲು ನೀರು ಹಾಗೂ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಬಾಸುಮತಿ ಅಕ್ಕಿಯನ್ನು ಹಾಕಿ ಉದುರು ಉದುರು ಇರುವಂತೆ ಅನ್ನವನ್ನು ತಯಾರು ಮಾಡಿಕೊಳ್ಳಬೇಕು. 
  • ನಂತರ ಒಲೆಯ ಮೇಲ ಬಾಣಲೆ ಇಟ್ಟು, ಅದಕ್ಕೆ 1 ಚಮಚ ತುಪ್ಪ ಹಾಕಿ, ಕಾದ ನಂತರ ಜೀರಿಗೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಹಸಿಮೆಣಸಿನ ಕಾಯಿ ಹಾಕಿ ಹುರಿದುಕೊಂಡು, ಮಾಡಿಟ್ಟುಕೊಂಡ ಅನ್ನ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಂಡರೆ ರುಚಿಕರವಾದ ಜೀರಾ ರೈಸ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com