ಸಿಹಿ ತಿಂಡಿ ಮಾಲ್ಪುರಿ 

ದಕ್ಷಿಣ ಕನ್ನಡದ ಜನಪ್ರಿಯ ತಿಂಡಿ ಮಾಲ್ಪುರಿ
ಮಾಲ್ಪುರಿ
ಮಾಲ್ಪುರಿ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು-1 ಕಪ್
ಸಕ್ಕರೆ ಪುಡಿ-ಒಂದೂವರೆ ಕಪ್
ಏಲಕ್ಕಿ ಪುಡಿ ಸ್ವಲ್ಪ
ನೀರು-ಮುಕ್ಕಾಲು ಕಪ್
ರುಚಿಗೆ ತಕ್ಕಷ್ಟು ಉಪ್ಪು
ಒಂದು ಚಿಟಿಕಿ ಬೇಕಿಂಗ್ ಸೋಡಾ ಪುಡಿ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಸಕ್ಕರೆ ಪುಡಿಯನ್ನು ಹಾಕಿ ಅದಕ್ಕೆ ನೀರು ಹಾಕಿ ಕಲೆಸಿಕೊಳ್ಳಬೇಕು. ನಂತರ ಏಲಕ್ಕಿ ಪುಡಿ, ಉಪ್ಪು, ಚಿಟಿಕಿ ಸೋಡಾ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ನಂತರ ಅದನ್ನು ಅರ್ಧ ಗಂಟೆ ನೆನೆಯಲು ಬಿಡಿ.

ಬಾಣಲೆಯಲ್ಲಿ ಅಥವಾ ದೋಸೆ ಮಾಡುವ ತವದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸೌಟಿನಲ್ಲಿ ಈ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣದಾಗಿ ಎರೆಯಿರಿ.

ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಒಂದು ಭಾಗ ಚೆನ್ನಾಗಿ ಎಣ್ಣೆಯಲ್ಲಿ ಹುರಿದಾಗ ಅದನ್ನು ದೋಸೆ ತೆಗೆಯುವ ಸೌಟಿನಲ್ಲಿ ಮಗುಚಿ ಹಾಕಿ. ಹಿಟ್ಟು ಮುಳುಗುವಷ್ಟು ಎಣ್ಣೆ ಹಾಕಿದರೆ ಸಾಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com