ಮಸಾಲಾ ಫ್ರೈ ಚಿಕನ್

ರುಚಿಕರವಾದ ಮಸಾಲಾ ಫ್ರೈ ಚಿಕನ್ ಮಾಡುವ ವಿಧಾನ...
ಮಸಾಲಾ ಫ್ರೈ ಚಿಕನ್
ಮಸಾಲಾ ಫ್ರೈ ಚಿಕನ್

ಬೇಕಾಗುವ ಪದಾರ್ಥಗಳು

  • ಚಿಕನ್ - 1 ಕೆಜಿ
  • ನಿಂಬೆಹಣ್ಣಿನ ರಸ- 1 ಚಮಚ
  • ಉಪ್ಪು- 1 ಚಮಚ
  • ಅರಿಶಿನದ ಪುಡಿ- ಸ್ವಲ್ಪ
  • ಅಚ್ಛಖಾರದ ಪುಡಿ- 2 ಚಮಚ
  • ಎಣ್ಣೆ -3-4 ಚಮಚ
  • ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು 1-2
  • ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
  • ದನಿಯಾ ಪುಡಿ - 1 ಚಮಚ
  • ಗರಂ ಮಸಾಲೆ ಪುಡಿ - 1 ಚಮಚ

ಮಾಡುವ ವಿಧಾನ...

  • ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಅದಕ್ಕೆ ನಿಂಬೆಹಣ್ಣಿನ ರಸ, ಉಪ್ಪು, ಅರಿಶಿನದ ಪುಡಿ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಬೇಕು.
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಂಡು ನಂತರ ಪಕ್ಕಕ್ಕಿಟ್ಟುಕೊಳ್ಳಬೇಕು. 
  • ನಂತರ ಬಾಣಲೆಯಲ್ಲಿಯೇ ಉಳಿದ ಎಣ್ಣೆಗೆ ಶುಂಠಿ, ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಈಗಾಗಲೇ ನೆನೆಸಿದ ಮಾಂಸವನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು. ನಂತರ ಇದಕ್ಕೆ ಟೊಮೆಟೋ, ದನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ 15 ನಿಮಿಷ ಬೇಯಿಸಬೇಕು. ನಂತರ ಈಗಾಗಲೇ ಹುರಿದಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ, ರುಚಿಕರವಾದ ಮಸಾಲಾ ಫ್ರೈ ಚಿಕನ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com