ಮಟನ್ ಕಾಲು ಸೂಪ್

ರುಚಿಕರವಾದ ಮಟನ್ ಕಾಲು ಸೂಪ್ ಮಾಡುವ ವಿಧಾನ...

Published: 24th July 2020 02:20 PM  |   Last Updated: 24th July 2020 04:43 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

 • ಮೇಕೆ ಕಾಲು- 4
 • ಶುಂಠಿ, ಬೆಳ್ಳುಳ್ಳಿ- ಸ್ವಲ್ಪ
 • ಕರಿಬೇವು- ಸ್ವಲ್ಪ
 • ಕೊತ್ತಂಬರಿ ಸೊಪ್ಪು-ಸ್ವಲ್ಪ
 • ಪುದೀನಾ- ಸ್ವಲ್ಪ
 • ಹಸಿಮೆಣಸಿನಕಾಯಿ- 3-4
 • ಟೊಮೆಟೋ- 1
 • ಕಾಳುಮೆಣಸು- ಸ್ವಲ್ಪ
 • ಜೀರಿಗೆ- ಸ್ವಲ್ಪ
 • ಎಣ್ಣೆ- ಸ್ವಲ್ಪ
 • ಸಾಸಿವೆ-ಸ್ವಲ್ಪ
 • ಅರಿಶಿನದಪುಡಿ-ಸ್ವಲ್ಪ
 • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

 • ಶುಂಠಿ, ಬೆಳ್ಳುಳ್ಳಿ, ಮೆಣಸು ಮತ್ತು ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಬೇಕು.
 • ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಸಾಸಿವೆ, ಕರಿಬೇವು, ಮೇಕೆ ಕಾಲು ಹಾಗೂ ಉಪ್ಪು ಹಾಕಬೇಕು. 
 • ಉಪ್ಪು ಮೇಕೆ ಕಾಲಿಗೆ ಹಿಡಿಯುವಂತೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನ ಕಾಯಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಹುರಿದುಕೊಂಡು ನೀರು ಹಾಕಿ, ಜೀರಿಗೆ, ಕಾಳುಮೆಣಸಿನ ಪುಡಿ, ಅರಿಶಿಣದ ಪುಡಿ ಹಾಕಿ ಕುಕ್ಕಲ್ ಮುಚ್ಚಳ ಮುಚ್ಚಿ, 10-15 ಕೂಗು ಕೂಗಿಸಿಕೊಳ್ಳಬೇಕು. ಪ್ರೆಶರ್ ಸಂಪೂರ್ಣವಾಗಿ ಹೊರ ಬಂದ ಬಳಿಕ ಮುಚ್ಚಳ ತೆಗೆದು ಮತ್ತೆ ಸ್ವಲ್ಪ ಸಮಯ ಬೇಯಿಸಿದರೆ, ರುಚಿಕರವಾದ ಮಟನ್ ಕಾಲಿನ ಸೂಪ್ ಸವಿಯಲು ಸಿದ್ಧ. 
Stay up to date on all the latest ಆಹಾರ-ವಿಹಾರ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp