ನಾಗರ ಪಂಚಮಿಗೆ ಗೋಧಿ ಹಿಟ್ಟಿನ ಸಿಹಿ ಉಂಡೆ

ಹಬ್ಬಗಳ ಸಾಲಿನಲ್ಲಿ ಆರಂಭದಲ್ಲಿ ಬರುವ ನಾಗರ ಪಂಚಮಿಗೆ ಸುಲಭವಾಗಿ ದೇವರ ನೈವೇದ್ಯಕ್ಕೆ ಮಾಡಬಹುದಾದ ಉಂಡೆ
ಗೋಧಿ ಹಿಟ್ಟಿನ ಉಂಡೆ
ಗೋಧಿ ಹಿಟ್ಟಿನ ಉಂಡೆ

ಬೇಕಾಗುವ ಪದಾರ್ಥಗಳು

ಗೋಧಿಹಿಟ್ಟು-2 ಕಪ್
ಬೆಲ್ಲ- 1.5 ಕಪ್
ತುಪ್ಪ-ಅರ್ಧ ಕಪ್
ಉಪ್ಪು
ಏಲಕ್ಕಿ ಪುಡಿ
ಒಣ ಕೊಬ್ಬರಿ
ಒಣದ್ರಾಕ್ಷಿ, ಗೋಡಂಬಿ, ಬಾದಾಮಿ
ಕರಿಯಲು ಎಣ್ಣೆ

ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಗೋಧಿ ಹಿಟ್ಟು ಹಾಕಿ ಅದಕ್ಕೆ ತುಪ್ಪ ಬಿಸಿ ಮಾಡಿ ಹಾಕಬೇಕು. ಗೋಧಿಹಿಟ್ಟಿಗೆ ಬೇಕೆನಿಸಿದರೆ ಸ್ವಲ್ಪ ಎರಡು ಸ್ಪೂನ್ ಚಿರೋಟಿ ರವೆ ಸೇರಿಸಿ, ನಂತರ ಸ್ವಲ್ಪ ಉಪ್ಪು ಹಾಕಿ, ನೀರು ಹಾಕಿ ಬೆರೆಸಬೇಕು.

ನಂತರ ಈ ಹಿಟ್ಟನ್ನು ಉಂಡೆ ಮಾಡಿಕೊಂಡು ಕೈಯಲ್ಲಿ ಸ್ವಲ್ಪ ಚಪ್ಪಟೆಯಾಕಾರ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಬೇಕು.ಇದು ಪೂರ್ತಿ ತಣ್ಣಗಾದ ಮೇಲೆ ಕೈಯಲ್ಲಿ ಪುಡಿ ಮಾಡಿ ಮಿಕ್ಸಿ ಜಾರಿನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಅದನ್ನು ಒಂದು ಪಾತ್ರೆಗೆ ಹಾಕಿಡಿ.

ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಪಾಕ ಮಾಡಿಕೊಳ್ಳಬೇಕು. ದ್ರಾಕ್ಷಿ, ಗೋಡಂಬಿ, ಬಾದಾಮಿಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ನಂತರ ಒಣ ಕೊಬ್ಬರಿಯನ್ನು ಸ್ವಲ್ಪ ಹುರಿದುಕೊಳ್ಳಬೇಕು. ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಗೋಡಂಬಿ, ದ್ರಾಕ್ಷಿ, ಬಾದಾಮಿ ಮತ್ತು ಏಲಕ್ಕಿಯನ್ನು ಪುಡಿ ಮಾಡಿಕೊಂಡು ಅದನ್ನು ಗೋಧಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿಕೊಳ್ಳಿ.

ಅಷ್ಟು ಹೊತ್ತಿಗೆ ಬೆಲ್ಲ ಪಾಕವಾಗಿರುತ್ತದೆ. ಅದನ್ನು ಗೋಧಿ ಹಿಟ್ಟಿಗೆ ಸೇರಿಸಿ ಉಂಡೆ ಮಾಡಿಕೊಳ್ಳಿ. ಗೋಧಿ ಹಿಟ್ಟಿನ ಸಿಹಿ ಉಂಡೆ ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com