ಅಕ್ಕಿ-ಉದ್ದಿನಬೇಳೆ ಚಕ್ಕುಲಿ

ಅಕ್ಕಿ-ಉದ್ದಿನಬೇಳೆ ಚಕ್ಕುಲಿ ಮಾಡುವ ವಿಧಾನ
ಚಕ್ಕುಲಿ
ಚಕ್ಕುಲಿ

ಬೇಕಾಗುವ ಸಾಮಗ್ರಿಗಳು
ಅಕ್ಕಿ-2 ಕಪ್
ಉದ್ದಿನಬೇಳೆ -ಮುಕ್ಕಾಲು ಕಪ್
ಜೀರಿಗೆ ಅಥವಾ ಎಳ್ಳು-1 ಚಮಚ
ಅಚ್ಚ ಖಾರದ ಪುಡಿ-1 ಚಮಚ
ಬೆಣ್ಣೆ-ನಿಂಬೆ ಗಾತ್ರದ್ದು
ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಬಾಣಲೆಯಲ್ಲಿ ಉದ್ದಿನ ಬೇಳೆಯನ್ನು ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಅದು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಹುರಿದುಕೊಳ್ಳಿ.

ಅದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಅಕ್ಕಿ ಹಿಟ್ಟು, ಜೀರಿಗೆ, ಅಚ್ಚ ಖಾರದ ಪುಡಿ ಮತ್ತು ಉಪ್ಪು ಹಾಕಿ. ಬೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಹಾಕಿ, ನಂತರ ಸ್ವಲ್ಪ ನೀರು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲೆಸಿಕೊಳ್ಳಿ.ಸ್ವಲ್ಪ ಹೊತ್ತು ಮುಚ್ಚಿಡಿ.

ನಂತರ ಚಕ್ಕುಲಿಯಾಕಾರಕ್ಕೆ ಒತ್ತಿ ಎಣ್ಣೆಯಲ್ಲಿ ಕರಿಯಿರಿ. ಗರಿಗರಿಯಾದ ರುಚಿ ರುಚಿಯಾದ ಚಕ್ಕುಲಿ ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com