ಬೆಂಡೆಕಾಯಿ ಮಸಾಲೆ

ರುಚಿಕರವಾದ ಬೆಂಡೆಕಾಯಿ ಮಸಾಲೆ ಮಾಡುವ ವಿಧಾನ...
ಬೆಂಡೆಕಾಯಿ ಮಸಾಲೆ
ಬೆಂಡೆಕಾಯಿ ಮಸಾಲೆ

ಬೇಕಾಗುವ ಪದಾರ್ಥಗಳು

  • ಶುಂಠಿ, ಬೆಳ್ಳುಳ್ಳು- ಸ್ವಲ್ಪ
  • ಈರುಳ್ಳಿ- 1
  • ಚಕ್ಕೆ, ಲವಂಗ ಪುಡಿ- ಅರ್ಧ ಚಮತ
  • ಅಚ್ಚಖಾರದ ಪುಡಿ- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಟೊಮೆಟೋ ಪ್ಯೂರಿ - 1 ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಮಿಕ್ಸಿ ಜಾರ್'ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಅದೇ ರೀದಿ ಟೊಮೆಟೋವನ್ನು ರುಬ್ಬಿಕೊಂಡು ಪ್ಯೂರಿ ತಯಾರು ಮಾಡಿಕೊಳ್ಳಬೇಕು. 
  • ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಎಣ್ಣೆಯನ್ನು ಹಾಕಿ ಅದಕ್ಕೆ ಕತ್ತರಿಸಿಕೊಂಡ ಬೆಂಡೆಕಾಯಿಗಳನ್ನು ಹಾಕಿ ಕರಿದುಕೊಳ್ಳಬೇಕು. ನಂತರ ಉಳಿದ ಎಣ್ಣೆಯನ್ನು ತೆಗೆದಿಟ್ಟು 4 ಚಮಚದಷ್ಟು ಎಣ್ಣೆ ಹಾಕಿ ಈಗಾಗಲೇ ರುಬ್ಬಿಕೊಂಡ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಚ್ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಟೊಮೆಟೋ ಪ್ಯೂರಿ ಹಾಕಬೇಕು. 
  • ಪ್ಯೂರಿ ಎಣ್ಣೆ ಬಿಟ್ಟ ಬಳಿಕ ಇದಕ್ಕೆ ಚಕ್ಕೆ,ಲವಂಗ ಪುಡಿ, ಖಾರದಪುಡಿ ಹಾಗೂ ಉಪ್ಪು ಹಾಕಿ ಕುದಿಸಿಕೊಂಡು, ನಂತರ ಬೆಂಡೆಕಾಯಿ ಹಾಕಿ 5 ನಿಮಿಷ ಬೇಯಿಸಿದರೆ, ರುಚಿಕರವಾದ ಬೆಂಡೆಕಾಯಿ ಮಸಾಲೆ ಸವಿಯಲು ಸಿದ್ಧ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com