ಮಕ್ಕಳಿಗೆ ಸ್ನ್ಯಾಕ್ಸ್: ಆಲೂ ಭುಜಿಯಾ ಅಥವಾ ಖಾರದ ಕಡ್ಡಿ

ಮಕ್ಕಳಿಗೆ ಇಷ್ಟವಾಗುವ ಸ್ನ್ಯಾಕ್ಸ್ ಆಲೂ ಭುಜಿಯಾ ಮಾಡುವ ವಿಧಾನ.
ಆಲೂ ಭುಜಿಯಾ
ಆಲೂ ಭುಜಿಯಾ

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ-2
ಅಕ್ಕಿಹಿಟ್ಟು-ಅರ್ಧ ಕಪ್
ಕಡ್ಲೆ ಹಿಟ್ಟು-2 ಕಪ್
ಉಪ್ಪು-ಸ್ವಲ್ಪ 
ಅಚ್ಚಕಾರದ ಪುಡಿ-ಸ್ವಲ್ಪ 
ಚಾಟ್ ಮಸಾಲಾ-ಸ್ವಲ್ಪ
ಗರಂ ಮಸಾಲಾ, ಜೀರಿಗೆ ಪೌಡರ್-ಸ್ವಲ್ಪ 
ಕರಿಯಲು ಎಣ್ಣೆ

ಮಾಡುವ ವಿಧಾನ: 
ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಸಿಪ್ಪೆ ತೆಗೆದು ನುಣ್ಣಗೆ ಚೂರುಗಳನ್ನಾಗಿ(ಸ್ಮ್ಂ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಅರ್ಧ ಕಪ್ ಗಿಂತ ಕಡಿಮೆ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಿ. ಎರಡು ಕಪ್ ಷ್ಟು ಕಡ್ಲೆ ಹಿಟ್ಟನ್ನು ಹಾಕಿಕೊಳ್ಳಿ. ಅಕ್ಕಿ ಹಿಟ್ಟು ಜಾಸ್ತಿ ಹಾಕುವುದು ಬೇಡ, ಹಾಕಿದರೆ ಗಟ್ಟಿಯಾಗುತ್ತದೆ. 

ರುಚಿಗೆ ತಕ್ಕಷ್ಟು ಉಪ್ಪು, ಖಾರಕ್ಕೆ ತಕ್ಕಷ್ಟು ಅಚ್ಚಕಾರದ ಪುಡಿ, ರುಚಿಗೆ ಸ್ವಲ್ಪ ಚಾಟ್ ಮಸಾಲಾ ಹಾಕಿಕೊಳ್ಳಿ. ಬೇಕೆಂದರೆ ಜೀರಿಗೆ ಪೌಡರ್, ಗರಂ ಮಸಾಲಾ ಪೌಡರ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ 2 ಸ್ಪೂನ್ ಗಳಷ್ಟು ಎಣ್ಣೆ ಬಿಸಿ ಮಾಡಿ ಹಾಕಿ.

ಈ ಮಿಶ್ರಣವನ್ನು ಒಣವಾಗಿ ಹಾಗೆಯೇ ಕಲೆಸಿಕೊಂಡು ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ನೋಡಿಕೊಂಡು ಹಾಕಿ ಕಲೆಸುತ್ತಾ ಚಾಪನಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಕಲೆಸಿದ ಮೇಲೆ ಮತ್ತೊಂದು ಸ್ಪೂನ್ ಎಣ್ಣೆಯನ್ನು ಮೇಲೆ ಹಾಕಿ.

ನಂತರ ಕಾರದ ಕಡ್ಡಿ ಅಥವಾ ಆಲೂ ಭುಜಿಯಾ ಕಣ್ಣುಗಳಿರುವ ಒತ್ತು ಪಾತ್ರೆ ತೆಗೆದುಕೊಂಡು ಅದರೊಳಗೆ ಹಾಕಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಹಿಟ್ಟನ್ನು ನೇರವಾಗಿ ಒತ್ತಿ ಹಾಕಿ. ಬೇರೆ ಎಣ್ಣೆ ಪದಾರ್ಥಗಳನ್ನು ಕರಿಯುವಂತೆ ಇದನ್ನೂ ಕರಿದು ತಿನ್ನಿ ಮಕ್ಕಳಿಗೆ ಕೊಡಿ ಚೆನ್ನಾಗಿ ತಿನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com