ನವರಾತ್ರಿಗೆ ಮಾಡಿ 7 ಕಪ್ ಬರ್ಫಿ ಸ್ವೀಟ್

7 ಕಪ್ ಬರ್ಫಿ ಮಾಡುವ ವಿಧಾನ
7 ಕಪ್ ಬರ್ಫಿ
7 ಕಪ್ ಬರ್ಫಿ

 ಬೇಕಾಗುವ ಸಾಮಗ್ರಿಗಳು
ಕಡ್ಲೆ ಹಿಟ್ಟು-1 ಕಪ್
ತೆಂಗಿನ ಕಾಯಿ ತುರಿ-1 ಕಪ್
ಹಾಲು-1 ಕಪ್
ಸಕ್ಕರೆ-2ರಿಂದ ಮೂರು ಕಪ್
ತುಪ್ಪ-1 ಕಪ್

ಮಾಡುವ ವಿಧಾನ
ಮೊದಲಿಗೆ ತೆಂಗಿನ ಕಾಯಿ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದನ್ನು ಪಕ್ಕದಲ್ಲಿಟ್ಟುಕೊಳ್ಳಿ. ಬೇಗನೆ ಸೀದು ಹೋಗದ ಬಾಣಲೆಯಾದರೆ ಉತ್ತಮ, ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಗಡ್ಡಿ ಸಿಗಬಾರದು.

ನಂತರ ಇದಕ್ಕೆ ರುಬ್ಬಿಟ್ಟ ತೆಂಗಿನ ಕಾಯಿ ತುರಿ, ನಂತರ ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಬರಬೇಕು. ಪಾಕ ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಸ್ವಲ್ಪ ಆರಿದ ಮೇಲೆ ಕತ್ತರಿಸಿ ತಿನ್ನಿ.

ನವರಾತ್ರಿ ಸಮಯದಲ್ಲಿ ದೇವಿಯ ನೇವೈದ್ಯಕ್ಕೂ ಇದನ್ನು ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com