ಮಳೆಗೆ ಸವಿಯಿರಿ ಬಿಸಿ ಬಿಸಿ ನಗ್ಗೆಟ್ಸ್

ನಗ್ಗೆಟ್ಸ್ ಮಾಡುವ ವಿಧಾನ ತಿಳಿದುಕೊಳ್ಳೋಣ
ನಗ್ಗೆಟ್ಸ್
ನಗ್ಗೆಟ್ಸ್

ಬೇಕಾಗುವ ಪದಾರ್ಥಗಳು
ಸಣ್ಣ ರವೆ-1 ಕಪ್
ಬ್ಯಾಡಗಿ ಮೆಣಸು-2ರಿಂದ 3
ಆಲೂಗಡ್ಡೆ-2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು
ನೀರು-ಎರಡು ಕಪ್
ಕಾಳು ಮೆಣಸು-ಒಂದು ಚಮಚ
ಅಕ್ಕಿ ಹಿಟ್ಟು-ಒಂದು ಚಮಚ
ಕರಿಯಲು ಎಣ್ಣೆ
ಈರುಳ್ಳಿ-1
ಜೀರಿಗೆ ಮತ್ತು ಸಾಸಿವೆ-ತಲಾ ಒಂದು ಚಮಚ


ಮಾಡುವ ವಿಧಾನ
ಒಂದು ಚಮಚ ಎಣ್ಣೆಯನ್ನು ಕಡಾಯಿಯಲ್ಲಿ ಹಾಕಿ ಜೀರಿಗೆ ಮತ್ತು ಸಾಸಿವೆ ಹುರಿದುಕೊಳ್ಳಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದನ್ನು ಕೂಡ ಹುರಿದುಕೊಳ್ಳಿ.

ನಂತರ ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಒಂದು ಕಪ್ ಸಣ್ಣ ರವೆ ಹಾಕಿ ಗಡ್ಡಿಯಾಗದಂತೆ ಕಲೆಸಿಕೊಳ್ಳಿ. ಉಂಡೆಯಾಕಾರಕ್ಕೆ ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಆಲೂಗಡ್ಡೆ ತುರಿದು ಹಾಕಿ. ಕೊತ್ತಂಬರಿ ಸೊಪ್ಪು, ಕಾಳುಮೆಣಸು ಪುಡಿ, ಬ್ಯಾಡಗಿ ಮೆಣಸನ್ನು ಪುಡಿ ಮಾಡಿಕೊಂಡು ಹಾಕಿ.

ಉಪ್ಪು ಮತ್ತು ಬೇರೆ ಮಸಾಲೆ ಪದಾರ್ಥಗಳಾದ ಗರಂ ಮಸಾಲೆ, ಚಾಟ್ ಮಸಾಲೆ, ಅಮ್ಚೂರ್ ಪೌಡರ್, ಕೊತ್ತಂಬರಿ ಪುಡಿ ಇತ್ಯಾದಿ ಹಾಕಬಹುದು, ಚೆನ್ನಾಗಿ ರುಚಿ ಕೊಡುತ್ತದೆ, ಒಂದು ಚಮಚ ಅಕ್ಕಿ ಹಿಟ್ಟು ಕೂಡ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ.


ನಂತರ ಇದನ್ನು ಕೈಯಿಂದ ನಗ್ಗೆಟ್ಸ್ ಆಕಾರ ಮಾಡಿಕೊಂಡು ಎಣ್ಣೆಯಲ್ಲಿ ಹುರಿದು ಬಿಸಿ ಇರುವಾಗಲೇ ಸಾಸ್ ಜೊತೆ ಸೇವಿಸಿ, ಹೊರಗೆ ಮಳೆ ಬರುವಾಗ ಬಿಸಿ ಬಿಸಿ ನಗ್ಗೆಟ್ಸ್ ತಿನ್ನಲು ರುಚಿಕರವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com