ಕುಕ್ಕರ್ ನಲ್ಲಿ ಸುಲಭವಾಗಿ ಬೇಯಿಸಿ ಬಿಸ್ಕೆಟ್ ಕೇಕ್

ಸುಲಭವಾಗಿ ಬಿಸ್ಕೆಟ್ ಕೇಕ್ ಮಾಡುವ ವಿಧಾನ
ಬಿಸ್ಕೆಟ್ ಕೇಕ್
ಬಿಸ್ಕೆಟ್ ಕೇಕ್

ಬೇಕಾಗುವ ಪದಾರ್ಥಗಳು


ಪಾರ್ಲೆಜಿ ಬಿಸ್ಕೆಟ್-ದೊಡ್ಡ ಪ್ಯಾಕೆಟ್
ಹ್ಯಾಪಿ ಹ್ಯಾಪಿ ಅಥವಾ ಇತರ ಚಾಕ್ಲೆಟ್, ಕೊಕೊ ಪೌಡರ್ ಮಿಶ್ರಿತ ಬಿಸ್ಕೆಟ್-1 ಪ್ಯಾಕೆಟ್
ಸಕ್ಕರೆ
ಹಾಲು
ಗೋಡಂಬಿ, ಗೇರು ಬೀಜ, ಪಿಸ್ತಾ, ಬಾದಾಮಿ ಇತ್ಯಾದಿ

ಮಾಡುವ ವಿಧಾನ
ಪಾರ್ಲೆಜಿ ಬಿಸ್ಕೆಟ್ ನ್ನು ರುಚಿಗೆ ತಕ್ಕಷ್ಟು ಸಕ್ಕರೆ ಜೊತೆ ತರಿ ತರಿಯಾಗಿ ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಳ್ಳಿ. 10 ರೂಪಾಯಿಯ ಪಾರ್ಲೆಜಿ ಬಿಸ್ಕೆಟ್ ಪ್ಯಾಕೆಟ್ ತಂದರೆ ಅದಕ್ಕೆ ಅರ್ಧ ಕಪ್ ಸಕ್ಕರೆ ಹಾಕಬಹುದು.

ನಂತರ ಹ್ಯಾಪಿ ಹ್ಯಾಪಿ ಬಿಸ್ಕೆಟ್ ನ್ನು ಸಹ ಸಣ್ಣಗೆ ಕತ್ತರಿಸಿ ಮಿಕ್ಸಿ ಜಾರಿನಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಎರಡನ್ನೂ ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಾಲು ಹಾಕಿ ಗಟ್ಟಿಯಾಗಿ ಮಿಶ್ರ ಮಾಡಿ. ಇಡ್ಲಿ ಹಿಟ್ಟಿನ ಹದವಿರಲಿ.ಇದಕ್ಕೆ ನಿಮ್ಮಿಷ್ಟದ ಡ್ರೈಫ್ರೂಟ್ಸ್, ಫ್ರೂಟಿಯನ್ನೂ ಸೇರಿಸಬಹುದು.

ನಂತರ ಕುಕ್ಕರ್ ನ ತಳಕ್ಕೆ ಸ್ವಲ್ಪ ನೀರು ಹಾಕಿ ಒಂದು ತಟ್ಟೆ ಇಟ್ಟು ಅದರ ಮೇಲೆ ಪಾತ್ರೆಯಲ್ಲಿ ಮಿಶ್ರಣ ಮಾಡಿಟ್ಟ ಬಿಸ್ಕೆಟ್ ಹಿಟ್ಟನ್ನು ಹಾಕಿ ಕುಕ್ಕರ್ ಮುಚ್ಚಿ ವಿಷಿಲ್ ತೆಗೆದು ಸುಮಾರು ಅರ್ಧ ಗಂಟೆ ಬೇಯಿಸಿ.ನಂತರ ಒಂದು ಮಧ್ಯದಲ್ಲಿ ಒಂದು ಕಡ್ಡಿ ಚುಚ್ಚಿ ನೋಡಿ, ಕಡ್ಡಿಗೆ ಹಿಟ್ಟು ಅಂಟಿಕೊಳ್ಳದಿದ್ದರೆ ಚೆನ್ನಾಗಿ ಬೆಂದಿದೆ ಎಂದರ್ಥ.

ನಂತರ ತೆಗೆದು ಕೇಕನ್ನು ಹೊರತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com